ಜಂತರ್ ಮಂತರ್‌ನಲ್ಲಿ ಧರಣಿ ನಡೆಸಲಿ: ಶಿಂಧೆ
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಜಂತರ್ ಮಂತರ್‌ನಲ್ಲಿ ಧರಣಿ ನಡೆಸಲಿ ಎಂದು...
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಜಂತರ್ ಮಂತರ್‌ನಲ್ಲಿ ಧರಣಿ ನಡೆಸಲಿ ಎಂದು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಹೇಳಿದ್ದಾರೆ.
ಗಣರಾಜ್ಯೋತ್ಸವದ ಪರೇಡ್ ಅಭ್ಯಾಸ ನಡೆಯುತ್ತಿದೆ. ಆದ್ದರಿಂದ ಗೃಹ ಸಚಿವಾಲಯದ ಎದುರು ಧರಣಿಗೆ ಅವಕಾಶವಿಲ್ಲ. ಸಚಿವಾಲಯದ ನಾರ್ಥ್ ಬ್ಲಾಕ್‌ನಲ್ಲಿ ನಿಷೇಧವೇರಲಾಗಿದೆ.
ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ತನಿಖೆಯ ಬಗ್ಗೆ ಭರವಸೆ ಇರಲಿ ಎಂದು ಶಿಂಧೆ ಹೇಳಿದ್ದಾರೆ.
ಎಲ್ಲಾ ಬೆಳವಣಿಗೆಗಳನ್ನು ದೇಶದ ಜನತೆ ಗಮನಿಸುತ್ತಿದ್ದಾರೆ, ಅವರೇ ಸರಿ ತಪ್ಪು ಯಾವುದೆಂದು ನಿರ್ಧರಿಸುತ್ತಾರೆ ಎಂದು ಹೇಳಿದ್ದಾರೆ.