ಪಾಕಿಸ್ಥಾನಲ್ಲಿ ಆತ್ಮಾಹುತಿ ಬಾಂಬ್ ಸ್ಪೋಟ: 13 ಸಾವು
ಇಸ್ಲಾಮಾಬಾದ್: ರಾವಲ್ಪಿಂಡಿಯಲ್ಲಿ ಜನ ಸಮುಚ್ಚಯ ಪ್ರದೇಶದಲ್ಲಿ ತಾಲಿಬಾನಿಗಳು ನಡೆಸಿದ ಆತ್ಮಾಹುತಿ ಬಾಂಬ್ ಸ್ಪೋಟದಲ್ಲಿ ಸೋಮವಾರ 13 ಮಂದಿ ಮೃತಪಟ್ಟಿದ್ದಾರೆ.
ರಾಯಲ್ ಆರ್ಟಿಲೆರಿ ಬಜಾರ್ನಲ್ಲಿ ಇಂದು ಬೆಳಿಗ್ಗೆ ತಾಲಿಬಾನಿಗಳು ಭದ್ರತಾಪಡೆಗಳನ್ನು ಗುರಿಯಾಗಿರಿಸಿಕೊಂಡು ನಡೆಸಿದ ಆತ್ಮಾಹುತಿ ಬಾಂಬ್ ಸ್ಪೋಟದಲ್ಲಿ 7 ಮಂದಿ ಸಾರ್ವಜನಿಕರು ಸೇರಿದಂತೆ 6 ಮಂದಿ ಭದ್ರತಾಪಡೆಗಳು ಮೃತಪಟ್ಟಿದ್ದಾರೆ. ಅಲ್ಲದೆ 17 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ಮಖ್ಬೊಲ್ ಅವರು ತಿಳಿಸಿದ್ದಾರೆ.
ರಾವಲ್ಪಿಂಡಿಯ ಪಾಕಿಸ್ತಾನ ಸೈನಿಕ ಕಚೇರಿಯ ಪಕ್ಕದ ವಸತಿ ಮತ್ತು ವಾಣಿಜ್ಯ ಕಟ್ಟಡದ ರಾಯಲ್ ಆರ್ಟಿಲೆರಿ ಬಜಾರ್ನಲ್ಲಿ ಈ ದಾಳಿ ಸಂಭವಿಸಿದ್ದು, ಈ ದುಷ್ಕೃತ್ಯ ಎಸಗಿರುವುದಾಗಿ ತಾಲಿಬಾನಿಗಳು ಒಪ್ಪಿಕೊಂಡಿದ್ದಾರೆ.
ತಾಲಿಬಾನಿಗಳ ಈ ಕೃತ್ಯದಿಂದ 13 ಮಂದಿ ಮೃತಪಟ್ಟಿದ್ದಾರೆ. ಜನ ಸಮುಚ್ಚಯ ಪ್ರದೇಶವಾದರಿಂದ 7 ಮಂದಿ ಸಾರ್ವಜನಿಕರು ಈ ದಾಳಿಗೆ ಬಲಿಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿ ಪೊತ್ಹಾರ್ ಮಾಧ್ಯಮಕ್ಕೆ ವರದಿ ನೀಡಿದ್ದಾರೆ.