2ನೇ ದಿನವು ಮುಂದುವರೆದ ಕೇಜ್ರಿವಾಲ್ ಧರಣಿ
ಮೂವರು ಪೊಲೀಸರ ಅಮಾನತಿಗೆ ಆಗ್ರಹಿಸಿ 2ನೇ ದಿನವಾದ ಮಂಗಳವಾರವು ದೆಹಲಿ ಮುಖ್ಯಮಂತ್ರಿ ...
ನವದೆಹಲಿ: ಮೂವರು ಪೊಲೀಸರ ಅಮಾನತಿಗೆ ಆಗ್ರಹಿಸಿ 2ನೇ ದಿನವಾದ ಮಂಗಳವಾರವು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಧರಣಿ ಮುಂದುವರೆಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಹೋರಾಟವನ್ನು ಮುಂದುವರೆಸುತ್ತೇವೆ. ಯಾವುದೇ ಕಾರಣಕ್ಕೂ ಕೈಬಿಡುವುದಿಲ್ಲ ಎಂದು ಹೇಳಿದ್ದಾರೆ. ದೆಹಲಿ ಪೊಲೀಸರ ವಿರುದ್ದ ಕೇಂದ್ರ ಸರ್ಕಾರ ಕ್ರಮಕೈಗೊಳ್ಳದಿರುವವರೆಗೆ ಹೋರಾಟ ಮುಂದುವರೆಸುತ್ತೇವೆ ಎಂದು ಹೇಳಿದ್ದಾರೆ.
ಧರಣಿಯನ್ನು ಜಂತರ್ ಮಂತರ್ನಲ್ಲಿ ನಡೆಸಿ ಎಂದು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಹೇಳುತ್ತಿದ್ದಾರೆ. ಆದರೆ ಅದನ್ನು ಹೇಳಲು ಅವರಿಗೇನು ಹಕ್ಕಿದೆ. ದೆಹಲಿ ಮುಖ್ಯಮಂತ್ರಿ ಅವರೋ ಅಥವಾ ನಾನೋ ಎಂದು ಪ್ರಶ್ನಿಸಿದ್ದಾರೆ.