ಜೆಡಿಎಸ್ ಕಚೇರಿ ಖಾಲಿ ಮಾಡಲು ಸುಪ್ರೀಂ ಆದೇಶ
ಜೆಡಿಎಸ್ ಕಚೇರಿ ಖಾಲಿ ಮಾಡುವಂತೆ ಜೆಡಿಎಸ್ ಪಕ್ಷಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿದೆ...
ನವದಹೆಲಿ: ಜೆಡಿಎಸ್ ಕಚೇರಿ ಖಾಲಿ ಮಾಡುವಂತೆ ಜೆಡಿಎಸ್ ಪಕ್ಷಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಜೆಡಿಎಸ್ ಕಚೇರಿ ವಿವಾದ ಕುರಿತಂತೆ ಸುಪ್ರೀಂ ಕೋರ್ಟ್‌ನಲ್ಲಿ ಜೆಡಿಎಸ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಸುಪ್ರೀಂ ಕೋರ್ಟ್‌ನಲ್ಲಿ ಜೆಡಿಎಸ್ ಕಚೇರಿ ವಿವಾದದ ಬಗ್ಗೆ ನ್ಯಾಯಾಮೂರ್ತಿ ರಾಧಾಕೃಷ್ಣನ್ ಅವರ ನೇತೃತ್ವದ ನ್ಯಾಯಾಪೀಠ ಈ ಆದೇಶ ಹೊರಡಿಸಿದೆ.
ಸುಪ್ರೀಂ ಕೋರ್ಟ್‌ನಲ್ಲಿ ಜೆಡಿಎಸ್ ಕಚೇರಿ ವಿವಾದದ ಬಗ್ಗೆ ನ್ಯಾಯಾಮೂರ್ತಿ ರಾಧಾಕೃಷ್ಣನ್ ಅವರ ನೇತೃತ್ವದ ನ್ಯಾಯಾಪೀಠ ಈ ಆದೇಶ ಹೊರಡಿಸಿದೆ.
ಡಿಸೆಂಬರ್ 31ರೊಳಗೆ ಕಚೇರಿ ಖಾಲಿ ಮಾಡುವಂತೆ ಕಾಲವಕಾಶ ನೀಡಲಾಗಿದೆ. 2015 ಜನವರಿ 1ರಿಂದ ಕಾಂಗ್ರೆಸ್ ವಶಪಡಿಸಕೊಳ್ಳಬಹುದು ಎಂದು ಹೇಳಿರುವ ನ್ಯಾಯಾಪೀಠ ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿದಿದೆ.
ಬೆಂಗಳೂರಿನ ಜೆಡಿಎಸ್ ಕಚೇರಿ ಇರುವ ಸ್ಥಳ ಕಾಂಗ್ರೆಸ್‌ಗೆ ಸೇರಿದ್ದರಿಂದ 3 ತಿಂಗಳೊಳಗೆ ಬಿಟ್ಟು ಕೊಡುವಂತೆ ಹೈಕೋರ್ಟ್ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಜೆಡಿಎಸ್ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು.
1954ರಲ್ಲಿ ಕಟ್ಟಡ ನಿರ್ಮಾಣ ಆಯಿತು. ನಂತರ ಕಾಂಗ್ರೆಸ್ ಇಬ್ಭಾಗವಾದ ಪರಿಣಾಮ ಜೆಡಿಎಸ್ ಈ ಜಾಗ ಪಡೆದುಕೊಂಡಿತು. ಆದರೆ 1984ರಲ್ಲಿ ಈ ವಿರುದ್ಧ ಕಾಂಗ್ರೆಸ್ ಅವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಇದರ ವಿರುದ್ಧ ಮೇಲ್ಮನವಿ ಸಲ್ಲಿಸಲಾಗಿತ್ತು. ಆದರೆ ಹೈಕೋರ್ಟ್ ಈ ಜಾಗವನ್ನು ಬಿಟ್ಟುಕೊಡುವಂತೆ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸುತ್ತೇವೆ ಎಂದು ಜೆಡಿಎಸ್ ಹೇಳಿತ್ತು. ಆದರೆ ಕಾನೂನು ಹೋರಾಟದಲ್ಲಿ ಜೆಡಿಎಸ್ ಹಿನ್ನಡೆ ಉಂಟಾಗಿದೆ.