ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಧರಣಿ ಕೈ ಬಿಟ್ಟ ಕೇಜ್ರಿವಾಲ್

ತನಿಖೆ ಮುಗಿಯುವವರೆಗೂ ಪೊಲೀಸ್ ಅಧಿಕಾರಿಗಳನ್ನು ರಜೆ ಮೇಲೆ ತೆರಳುವಂತೆ ಕೇಂದ್ರ ಸರ್ಕಾರ ಸೂಚಸಿರುವುದರಿಂದ ಧರಣಿ...

Vishwanath S
Updated On : 21 Jan 2014, 8:12 am

ನವದೆಹಲಿ: ತನಿಖೆ ಮುಗಿಯುವವರೆಗೂ ಪೊಲೀಸ್ ಅಧಿಕಾರಿಗಳನ್ನು ರಜೆ ಮೇಲೆ ತೆರಳುವಂತೆ ಕೇಂದ್ರ ಸರ್ಕಾರ ಸೂಚಸಿರುವುದರಿಂದ ಧರಣಿ ಕೈಬಿಡುತ್ತೇನೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಂಗಳವಾರ ತಿಳಿಸಿದ್ದಾರೆ.

ಭ್ರಷ್ಟ ಅಧಿಕಾರಿಗಳ ವಿರುದ್ಧ ರೈಲ್ ಭವನದ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿರುವ ಕೇಜ್ರಿವಾಲ್ ಅವರು, ಕೇಂದ್ರ ಸರ್ಕಾರ ದೆಹಲಿಯ ಮಾಲವೀಯ ನಗರದ ಎಸ್‌ಹೆಚ್‌ಒ, ಪಹಾಡ್‌ಗಂಜ್ ಪಿಸಿಆರ್ ಇನ್‌ಚಾರ್ಜ್‌ಗೆ ರಜೆ ಮೇಲೆ ತೆರಳವಂತೆ ಸೂಚಿಸಿದೆ. ಹೀಗಾಗಿ ಆಮ್ ಆದ್ಮಿ ಪ್ರತಿಭಟನೆ ವಾಪಸ್ ಪಡೆದಿದೆ ಎಂದರು.

ಕೇಂದ್ರ ಸರ್ಕಾರದ ಆದೇಶ ಹೊರಬರುತ್ತಿದ್ದಂತೆ ಪ್ರತಿಭಟನಾ ಸ್ಥಳದಲ್ಲಿ ಜಯದ ವಾತಾವರಣ ಸೃಷ್ಟಿಯಾಯಿತು. ಈ ವೇಳೆ ಮಾತನಾಡಿದ ಕೇಜ್ರಿವಾಲ್, ಇದು ದೆಹಲಿ ಜನತೆಗೆ ಸಂದ ಜಯ. ದೆಹಲಿಯಲ್ಲಿ ಮಹಿಳೆಯರಿಗೆ ಸೂಕ್ತ ರಕ್ಷಣೆ ಇಲ್ಲ. ಹೀಗಾಗಿ ಮಹಿಳೆಯರ ರಕ್ಷಣೆಗಾಗಿ ಆಪ್ ಪ್ರತಿಭಟನೆ ಕೈಗೊಂಡಿತ್ತು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement