ಸುನಂದಾ ಪ್ರಕರಣ ಹೆಚ್ಚಿನ ತನಿಖೆಗೆ ಎಸ್‌ಡಿಎಂ ಆದೇಶ
ಕೇಂದ್ರ ಸಚಿವ ಶಶಿತರೂರ್ ಪತ್ನಿ ಸುನಂದಾ ಪುಷ್ಕರ್ ವಿಷಪ್ರಾಶನದಿಂದ ಸಾವನ್ನಪ್ಪಿದ್ದಾರೆ ಎಂಬ ಏಮ್ಸ್ ವೈದ್ಯರ ವರದಿಯನ್ವಯ ಪ್ರಕರಣವನ್ನು...
ನವದೆಹಲಿ: ಕೇಂದ್ರ ಸಚಿವ ಶಶಿತರೂರ್ ಪತ್ನಿ ಸುನಂದಾ ಪುಷ್ಕರ್ ವಿಷಪ್ರಾಶನದಿಂದ ಸಾವನ್ನಪ್ಪಿದ್ದಾರೆ ಎಂಬ ಏಮ್ಸ್ ವೈದ್ಯರ ವರದಿಯನ್ವಯ ಪ್ರಕರಣವನ್ನು ಕೂಲಂಕುಶವಾಗಿ ತನಿಖೆ ನಡೆಸುವಂತೆ ಪೋಲೀಸರಿಗೆ ಉಪ ವಿಭಾಗೀಯ ನ್ಯಾಯಾಧೀಶರು ಮಂಗಳವಾರ ಆದೇಶಿಸಿದ್ದಾರೆ.
ಸುನಂದಾ ಪುಷ್ಕರ್ ಅವರು ವಿಷಸೇವನೆಯಿಂದಲೇ ಸಾವನ್ನಪ್ಪಿದ್ದಾರೆ ಎಂಬ ಅಂಶವನ್ನು ಪತ್ತೆ ಮಾಡುವಂತೆ ಎಸ್‌ಡಿಎಂ ದೆಹಲಿ ಪೊಲೀಸರಿಗೆ ಆದೇಶಿಸಿದ್ದು, ಈ ಪ್ರಕರಣವನ್ನು ಕೊಲೆ ಅಥವಾ ಆತ್ಮಹತ್ಯೆ ದೃಷ್ಠಿ ಕೋನದಿಂದ ತನಿಖೆ ಮಾಡುವಂತೆ ಸೂಚಿಸಿದ್ದಾರೆ.
ಅತಿಯಾಗಿ ಅಲ್ಪ್ರಾಕ್ಸ್ ಮಾತ್ರೆ ಸೇವನೆಯಿಂದ ಸುನಂದಾ ಪುಷ್ಕರ್ ಅವರು ಸಾವನ್ನಪ್ಪಿರುವುದಾಗಿ ಏಮ್ಸ್ ವೈದ್ಯರ ತಂಡ ಸೋಮವಾರ ಉಪ ವಿಭಾಗೀಯ ನ್ಯಾಯಾಧೀಶರಾದ ಅಲೋಕ್ ಶರ್ಮಾ ಅವರಿಗೆ ವರದಿ ಸಲ್ಲಿಸಿದ್ದರು.
ಇಂದು ವರದಿಯನ್ನು ಪರಿಶೀಲನೆ ನಡೆಸಿದ ನ್ಯಾಯಾಧೀಶರು, ವೈದ್ಯರ ವರದಿಯನ್ವಯ ಸುನಂದಾ ವಿಷಕಾರಿ ಪದಾರ್ಥ ಸೇವನೆಯಿಂದ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಆದರೆ ಪೊಲೀಸ್ ತನಿಖೆ ವೇಳೆ ಸುನಂದಾ ಅವರ ದೇಹದ ಮೇಲೆ ಗಾಯಗಳ ಗುರುತು ಪತ್ತೆಯಾಗಿರುವುದರಿಂದ ಕಂಡುಬಂದಿರುತ್ತದೆ. ಹೀಗಾಗಿ ಪ್ರಕರಣವನ್ನು ಹೆಚ್ಚಿನ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.