ಆಪ್ ಮುಖಂಡ ಕುಮಾರ್ ವಿಶ್ವಾಸ್ಗೆ ನೋಟಿಸ್
ಕೇರಳ ನರ್ಸ್ಗಳ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಆಮ್ ಆದ್ಮಿ ಪಕ್ಷ(ಆಪ್)ದ ಮುಂಖಡ ಕುಮಾರ್ ವಿಶ್ವಾಸ್ ಅವರಿಗೆ ಯುನೈಟೆಡ್...
ನವದೆಹಲಿ: ಕೇರಳ ನರ್ಸ್ಗಳ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಆಮ್ ಆದ್ಮಿ ಪಕ್ಷ(ಆಪ್)ದ ಮುಂಖಡ ಕುಮಾರ್ ವಿಶ್ವಾಸ್ ಅವರಿಗೆ ಯುನೈಟೆಡ್ ನರ್ಸ್ ಅಸೋಸಿಯೇಷನ್ ಬುಧವಾರ ನೋಟಿಸ್ ನೀಡಿದೆ.
2008ರಲ್ಲಿ ರಾಂಚಿಯಲ್ಲಿ ನಡೆದಿದ್ದ ಕವಿ ಸಮ್ಮೇಳನವೊಂದರಲ್ಲಿ ಕೇರಳ ನರ್ಸ್ಗಳ ವಿರುದ್ಧ ಕೆಲವು ನಗೆ ಚಟಾಕಿಗಳನ್ನು ಹಾರಿಸಿದ್ದ ಅವರು, ಕೇರಳ ಮೂಲದ ನರ್ಸ್ಗಳ ಮನಸ್ಸಿಗೆ ಘಾಸಿಯಾಗುವಂತೆ ಮಾತನಾಡಿದ್ದರು. ಈ ಕಾರ್ಯಕ್ರಮದ ವಿಡಿಯೋ ಇತ್ತೀಚೆಗಷ್ಟೆ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಸಾರಗೊಂಡು, ವಿಶ್ವಾಸ್ ಟೀಕೆಗೆ ಗುರಿಯಾಗಿದ್ದರು.
ಈ ವಿಡಿಯೋ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನಕ್ಕೀಡಾಗಿದ್ದ ಕೇರಳ ನರ್ಸ್ಗಳ ಸಂಘಟನೆಯವರು ವಿಶ್ವಾಸ್ ವಿರುದ್ಧ ಕ್ರಮಕೈಗೊಳ್ಳುವಂತೆ ಯುನೈಟೆಡ್ ನರ್ಸ್ ಅಸೋಸಿಯೇಷನ್ ಮೊರೆ ಹೋಗಿದ್ದರು. ಈ ಹಿನ್ನಲೆಯಲ್ಲಿ ವಿಶ್ವಾಸ್ಗೆ ಅಸೋಸಿಯೇಷನ್ ನೋಟಿಸ್ ಜಾರಿ ಮಾಡಿದೆ.
ಏತನ್ಮಧ್ಯೆ, ಕೇರಳ ನರ್ಸ್ಗಳ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದರಿಂದ ಆಕೋಶಗೊಂಡ ಕೇರಳ ನರ್ಸ್ಗಳು ದೆಹಲಿಯ ಕೇರಳ ಭವನದ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.
ವಿಶ್ವಾಸ್ ವಿರುದ್ಧ ಕ್ರಮ ಕೈಗೊಳ್ಳುಬೇಕು. ಅಲ್ಲದೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ವಿಶ್ವಾಸ್ ಸ್ಪರ್ಧಿಸಬಾರದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಒತ್ತಾಯಿಸಿದ್ದಾರೆ.