'ಕೇಜ್ರಿವಾಲ್ ಒಬ್ಬ "ತಿಕ್ಕಲು' ಮುಖ್ಯಮಂತ್ರಿ': ಶಿಂಧೆ
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 'ಒಬ್ಬ ತಿಕ್ಕಲುಮುಖ್ಯಮಂತ್ರಿ' ಎಂದು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ...
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 'ಒಬ್ಬ ತಿಕ್ಕಲು ಮುಖ್ಯಮಂತ್ರಿ' ಎಂದು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರು ಬುಧವಾರ ಜರೆದಿದ್ದಾರೆ.
ಇಂದು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ದೆಹಲಿಯಲ್ಲಿ ರೈಲ್ ಭವನ್ ಬಳಿ ಧರಣಿ ಕೂತಿದ್ದ ಸಿಎಂ ಕೇಜ್ರಿವಾಲ್ರನ್ನು ತಿಕ್ಕಲುಮುಖ್ಯಮಂತ್ರಿ ಎಂದು ಕರೆಯುವ ಮೂಲಕ ಶಿಂಧೆ ಅವರು ವಿವಾದಕ್ಕೆ ಗುರಿಯಾಗಿದ್ದಾರೆ. ಧರಣಿ ನಿರತ ಸಿಎಂ ಕೇಜ್ರಿವಾಲ್ ಅವರಿಂದಾಗಿ ದೆಹಲಿಯ ಹಲವು ಪೊಲೀಸರಿಗೆ ರಜೆಯನ್ನು ರದ್ದು ಪಡಿಸಬೇಕಾಯಿತು ಎಂದು ಹೇಳಿದ್ದಾರೆ.
ದೆಹಲಿಯ ರೈಲ್ವೇ ಭವನದ ಆವರಣದಲ್ಲಿ ಐವರು ಭ್ರಷ್ಟ ಪೊಲೀಸ್ ಅಧಿಕಾರಿಗಳನ್ನು ಅಮಾನತ್ತುಗೊಳಿಸುವಂತೆ ಆಗ್ರಹಿಸಿ ಕೇಜ್ರಿವಾಲ್ ಅವರು ತಮ್ಮ ಸಂಪುಟದ ಸಹೋದ್ಯೋಗಿಗಳೊಂದಿಗೆ ಧರಣಿ ಕೂತಿದ್ದರು. ಹೀಗಾಗಿ ಧರಣಿ ನಿರತ ಸಿಎಂ ಕೇಜ್ರಿವಾಲ್ ಅವರಿಗೆ ರಕ್ಷಣೆ ನೀಡುವ ಸಲುವಾಗಿ ಪೊಲೀಸರಿಗೆ ರಜೆಯನ್ನು ರದ್ದು ಪಡಿಸಬೇಕಾಯಿತು ಎಂದರು.