ಖ್ಯಾತ ಗಾಯಕ ಯಶವಂತ ಹಳಿಬಂಡಿ ನಿಧನ
ಖ್ಯಾತ ಹಿನ್ನೆಲೆ ಗಾಯಕ ಯಶವಂತ ಹಳಿಬಂಡಿ ಬುಧವಾರ ಬೆಳಿಗ್ಗೆ ನಿಧನರಾಗಿದ್ದಾರೆ...
ಬೆಂಗಳೂರು: ಖ್ಯಾತ ಹಿನ್ನೆಲೆ ಗಾಯಕ ಯಶವಂತ ಹಳಿಬಂಡಿಯವರು ಬುಧವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 64 ವರ್ಷ ವಯಸ್ಸಾಗಿತ್ತು.
ಬೆಂಗಳೂರಿನ ಹನುಮಂತನಗರದ ಬಾಂಕ್‌ಕಾಲೋನಿಯಲ್ಲಿ ವಾಸವಾಗಿದ್ದರು.
ಅವರು ಆಕಾಶವಾಣಿ ಕಲಾವಿದರಾಗಿ ಕಾರ್ಯ ನಿರ್ವಹಿಸಿದ್ದರು. 'ಪಾತರಗಿತ್ತಿ ಪಕ್ಕ' ಹಾಡಿನಿಂದ ಖ್ಯಾತರಾಗಿದ್ದರು.