ತರೂರ್ ನನ್ನ ತಾಯಿಗೆ ಹಾನಿಗೊಳಿಸಲು ಸಾಧ್ಯವಿಲ್ಲ: ಸುನಂದಾ ಪುತ್ರ
ದೆಹಲಿಯ ಲೀಲಾ ಹೊಟೇಲ್ನಲ್ಲಿ ನಿಗೂಢವಾಗಿ ಸಾವಿಗೀಡಾಗಿದ್ದ ಕೇಂದ್ರ ಸಚಿವ ಶಶಿತರೂರ್ ಪತ್ನಿ ಸುನಂದಾ ತರೂರ್ ಅವರು...
ನವದೆಹಲಿ: ದೆಹಲಿಯ ಲೀಲಾ ಹೊಟೇಲ್ನಲ್ಲಿ ನಿಗೂಢವಾಗಿ ಸಾವಿಗೀಡಾಗಿದ್ದ ಕೇಂದ್ರ ಸಚಿವ ಶಶಿತರೂರ್ ಪತ್ನಿ ಸುನಂದಾ ತರೂರ್ ಅವರು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲರಾಗಿರಲಿಲ್ಲ. ಹಾಗೆಯೇ ಸುನಂದಾ ಅವರನ್ನು ದೈಹಿಕವಾಗಿ ಹಾನಿಗೊಳಿಸಲು ತಂದೆ ಶಶಿತರೂರ್ ಅವರಿಗೆ ಸಾಧ್ಯವಿಲ್ಲ ಎಂದು ಸುನಂದಾ ಪುತ್ರ ಶಿವ್ ಮೇನನ್ ಅವರು ಬುಧವಾರ ಹೇಳಿದ್ದಾರೆ.
ಸುನಂದಾ ಸಾವಿಗೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಶಿವ್ ಮೇನನ್, ನನ್ನ ತಂದೆ ಶಶಿತರೂರ್ ಮತ್ತು ತಾಯಿ ಸುನಂದಾ ಪುಷ್ಕರ್ ಅವರು ಹೆಚ್ಚು ಅನ್ಯೂನತೆಯಿಂದ ಇರುತ್ತಿದ್ದರು ಎಂದು ಹೇಳಿದ್ದಾರೆ. ಆಗಾಗ ಕಾಣಿಸುತ್ತಿದ್ದ ವ್ಯತಾಸಗಳನ್ನು ಅವರು ಮೀರಿ ಹೋಗುತ್ತಿದ್ದರು. ಇದು ಮಾಧ್ಯಮಗಳಿಂದಾದ ಒತ್ತಡ, ಮತ್ತು ಹಲವಾರು ಔಷಧಿಗಳ ಸಂಕೀರ್ಣತೆ ಸಂಯೋಗದಿಂದ ಈ ರೀತಿ ಆಗಿದೆ ಎಂದಿದ್ದಾರೆ.