ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ದೆಹಲಿ ಕ್ರೈಂ ಬ್ರ್ಯಾಂಚ್‌ಗೆ ಸುನಂದಾ ಸಾವು ಪ್ರಕರಣ

Vishwanath S
Updated On : 23 Jan 2014, 6:29 am

ನವದೆಹಲಿ: ದೆಹಲಿಯ ಲೀಲಾ ಹೊಟೇಲ್‌ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದ ಕೇಂದ್ರ ಸಚಿವ ಶಶಿತರೂರ್ ಪತ್ನಿ ಸುನಂದಾ ಪುಷ್ಕರ್ ಅವರ ಪ್ರಕರಣದ ತನಿಖೆಯನ್ನು ದೆಹಲಿ ಕ್ರೈಂಬ್ರ್ಯಾಂಚ್‌ಗೆ ಗುರುವಾರ ವರ್ಗಾಹಿಸಲಾಗಿದೆ.

ಹೈ-ಪ್ರೋಫೈಲ್ ಪ್ರಕರಣಗಳಲ್ಲಿ ಒಂದಾದ ಸುನಂದಾ ನಿಗೂಢ ಸಾವು ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ದೆಹಲಿ ಪೊಲೀಸರು,  ಕ್ರೈಂ ಬ್ರ್ಯಾಂಚ್‌ಗೆ ವರ್ಗಾಹಿಸಿದೆ ಎಂದು ತಿಳಿದುಬಂದಿದೆ.

ಮಾತ್ರೆಗಳನ್ನು ಹೆಚ್ಚಾಗಿ ಸೇವಿಸಿರುವುದರಿಂದ ಸುನಂದಾ ಸಾವಿಗೀಡಾಗಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಅವರ ದೇಹದಲ್ಲಿ ಕಚ್ಚಿದ್ದ ಗುರುತು ಸೇರಿದಂತೆ ಇತರೆ ಹಿಂಸಾತ್ಮಕ ಗುರುತುಗಳು ಪತ್ತೆಯಾಗಿವೆ ಎಂದು ವೈದ್ಯಕೀಯ ವರದಿ ಇಂದು ಹೇಳಿದೆ. ಈ ವರದಿ ಹಿನ್ನೆಲೆಯಲ್ಲಿ ಸುನಂದಾ ಸಾವು ಪ್ರಕರಣದ ತನಿಖೆಯನ್ನು ಕ್ರೈಂಬ್ರ್ಯಾಂಚ್ ಪೊಲೀಸರಿಗೆ ವಹಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement