ಭಾರ್ತಿ ರಾಜಿನಾಮೆಗೆ ಬಿಜೆಪಿ ಗಡುವು
ಉಗಾಂಡ ಮಹಿಳೆ ಮೇಲಿನ ಹಲ್ಲೆ ಪ್ರಕರಣವನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ, ಕಾನೂನು ಸಚಿವ ಸೋಮನಾಥ್ ಭಾರ್ತಿ ಅವರ...
ನವದೆಹಲಿ: ಉಗಾಂಡ ಮಹಿಳೆ ಮೇಲಿನ ಹಲ್ಲೆ ಪ್ರಕರಣವನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ, ಕಾನೂನು ಸಚಿವ ಸೋಮನಾಥ್ ಭಾರ್ತಿ ಅವರ ರಾಜಿನಾಮೆ ಪಡೆಯುವಂತೆ ಆಮ್ ಆದ್ಮಿ ಪಕ್ಷ(ಎಎಪಿ)ಕ್ಕೆ ಗುರುವಾರ ಗಡುವು ನೀಡಿದೆ.
ಸಚಿವ ಸೋಮನಾರ್ಥ್ ಭಾರ್ತಿ ಅವರ ಪದಚ್ಯುತಿಗೆ ಆಗ್ರಹಿಸಿರುವ ಬಿಜೆಪಿ, ಜನವರಿ. 26ರೊಳಗೆ ರಾಜಿನಾಮೆ ಪಡೆಯುವಂತೆ ಎಎಪಿಗೆ ಗಡುವು ನೀಡಿದೆ.
ಸೋಮನಾಥ್ ಭಾರ್ತಿ ಅವರ ರಾಜಿನಾಮೆ ಪಡೆಯುವಲ್ಲಿ ಎಎಪಿ ವಿಫಲವಾದರೆ. ರಾಜ್ಯ ವ್ಯಾಪ್ತಿ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ಹೇಳಿದೆ.