ರೈಲಿನಿಂದ ಸಮುದ್ರಕ್ಕೆ ಜಿಗಿದು 67ರ ಮಹಿಳೆ ಆತ್ಮಹತ್ಯೆ
ಚಲಿಸುತ್ತಿರುವ ಪ್ಯಾಸೆಂಜರ್ ರೈಲಿನಿಂದ ಸಮುದ್ರಕ್ಕೆ ಜಿಗಿದು 67ರ ಹರೆಯದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ...
ರಾಮೇಶ್ವರಂ: ಚಲಿಸುತ್ತಿರುವ ಪ್ಯಾಸೆಂಜರ್ ರೈಲಿನಿಂದ ಸಮುದ್ರಕ್ಕೆ ಜಿಗಿದು 67ರ ಹರೆಯದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಸಂಜೆ ವರದಿಯಾಗಿದೆ.
ರೈಲು ಪಂಬನ್ ಸೇತುವೆ ದಾಟುತ್ತಿದ್ದ ವೇಳೆ ಈ ಮಹಿಳೆ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪ್ರಾಥಮಿಕ ತನಿಖಾ ವರದಿಗಳ ಪ್ರಕಾರ ಆತ್ಮಹತ್ಯೆಗೈದ ಮಹಿಳೆ ತಿರುಚಿನಾಪಳ್ಳಿ ಮೂಲದವರಾಗಿದ್ದು, ರಾಮೇಶ್ವರಂನಿಂದ ತನ್ನೂರಿಗೆ ಮರಳುತ್ತಿದ್ದರು.
ಕೂಡಲೇ ಕರಾವಳಿ ರಕ್ಷಣಾ ಪಡೆ ಮೃತದೇಹವನ್ನು ಮೇಲಕ್ಕೆತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.