ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸುನಂದಾ ಕೈಯಲ್ಲಿ ಕಚ್ಚಿದ ಗುರುತು ಪತ್ತೆ: ವರದಿ

ನಿಗೂಢವಾಗಿ ಸಾವಿಗೀಡಾದ ಸುನಂದಾ ಪುಷ್ಕರ್ ಅವರ ಕೈಯಲ್ಲಿ ಕಚ್ಚಿದ ಗಾಯದ ಗುರುತು...

Mainashree
Updated On : 23 Jan 2014, 10:20 am

ನವದೆಹಲಿ: ನಿಗೂಢವಾಗಿ ಸಾವಿಗೀಡಾದ ಸುನಂದಾ ಪುಷ್ಕರ್ ಅವರ ಕೈಯಲ್ಲಿ ಕಚ್ಚಿದ ಗಾಯದ ಗುರುತು ಕಂಡು ಬಂದಿದೆ ಎಂದು ವೈದ್ಯಕೀಯ ವರದಿ ಹೇಳಿದೆ.

ಕೇಂದ್ರ ಸಚಿವ ಶಶಿತರೂರ್ ಅವರ ಪತ್ನಿ ಸುನಂದಾ ಅವರ ಸಾವು ದಿನದಿಂದ ದಿನಕ್ಕೆ ತಿರುವು ಪಡೆದುಕೊಳ್ಳುತ್ತಿದೆ. ವೈದ್ಯಕೀಯ ವರದಿ ಪ್ರಕಾರ ಸುನಂದಾ ಕೈಯಲ್ಲಿ ಕಚ್ಚಿದ್ದ ಗುರುತು ಹಾಗೂ ದೇಹದಲ್ಲಿ ಹೊಡೆದಿರುವ ಗುರುತು ಪತ್ತೆಯಾಗಿವೆ ಎಂದು ವೈದ್ಯಕೀಯ ವರದಿ ಹೇಳಿದೆ.

ಮಾತ್ರೆಗಳನ್ನು ಹೆಚ್ಚಾಗಿ ಸೇವಿಸಿರುವುದರಿಂದ ಸುನಂದಾ ಸಾವಿಗೀಡಾಗಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಅವರ ದೇಹದಲ್ಲಿ ಕಚ್ಚಿದ್ದ ಗುರುತು ಸೇರಿದಂತೆ ಇತರೆ ಹಿಂಸಾತ್ಮಕ ಗುರುತುಗಳು ಪತ್ತೆಯಾಗಿವೆ ಎಂದು ವೈದ್ಯಕೀಯ ವರದಿ ಹೇಳುತ್ತಿದೆ.

ಈ ಸಂಬಂಧ ದೆಹಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮೊನ್ನೆ ಪುಷ್ಕರ್ ಅವರ ಮರಣೋತ್ತರ ಪರೀಕ್ಷಾ ವರದಿಯನ್ನು ಏಮ್ಸ್ ವೈದ್ಯರು ಬಹಿರಂಗಪಡಿಸಿದ್ದರು. ಅಲ್ಲದೆ ವರದಿಯಲ್ಲಿ ಸುನಂದಾ ಅವರು ಒತ್ತಡ ನಿವಾರಣೆಗಾಗಿ ಸೇವಿಸುವ ಮಾತ್ರೆಯನ್ನು ಅತಿಯಾಗಿ ಸೇವನೆ ಮಾಡಿರುವುದರಿಂದ ಅವರು ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement