ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕೇಜ್ರಿವಾಲ್ ಗಿಂತ ರಾಖಿ ಬೆಸ್ಟ್: ಉದ್ಧವ್ ಠಾಕ್ರೆ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗಿಂತ ರಾಖಿ ಸಾವಂತ್ ಬೆಸ್ಟ್ ಎಂದು ಶಿವಸೇನಾ...

Mainashree
Updated On : 24 Jan 2014, 11:26 am

ಮುಂಬೈ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗಿಂತ ರಾಖಿ ಸಾವಂತ್ ಬೆಸ್ಟ್ ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ.

ಖಾಸಗಿ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ ಠಾಕ್ರೆ. ಕೇಜ್ರಿವಾಲ್ ಗಿಂತ ರಾಖಿ ಉತ್ತಮ ಎಂದಿದ್ದಾರೆ.

ರಾಖಿಗೆ ಅಧಿಕಾರ ನೀಡಿದ್ರೆ ಉತ್ತಮವಾಗಿ ನಿಭಾಯಿಸುತ್ತಾರೆ ಎಂದ ಅವರು, ಅರವಿಂದ್ ಕೇಜ್ರಿವಾಲ್ ಐಟಂ ಗರ್ಲ್ ಇದ್ದಂತೆ ಎಂದು ವ್ಯಂಗ್ಯವಾಡಿದ್ದಾರೆ.

ಕೇಜ್ರಿವಾಲ್ ಹುಚ್ಚನ ರೀತಿ ಆಡುತ್ತಿದ್ದಾರೆ. ಇಂತಹವರು ಅಧಿಕಾರ ನಡೆಸಲು ಸಾಧ್ಯವಿಲ್ಲ ಎಂದು ಠಾಕ್ರೆ ಟೀಕಿಸಿದ್ದಾರೆ.

ಠಾಕ್ರೆ ಅವರ ಹೇಳಿಕೆಯನ್ನು ಸ್ವಾಗತಿಸಿರುವ ರಾಖಿ ಸಾವಂತ್, ಠಾಕ್ರೆ ಅವರ ಅಭಿಪ್ರಾಯ ಸರಿಯಾಗಿದೆ. ಅರವಿಂದ್ ಕೇಜ್ರಿವಾಲ್‌ಗೆ ಅಧಿಕಾರ ನೀಡಿರುವುದು ಜನರ ಸೇವೆ ಮಾಡಲೆಂದು ಆದರೆ ಅವರು ಕಾನೂನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

ಠಾಕ್ರೆ ಅವರು ಹೇಳಿದಂತೆ ಕೇಜ್ರಿವಾಲ್ ಜನರ ಸೇವೆ ಮಾಡುತ್ತಿಲ್ಲ. ಬದಲಾಗಿ ಕಾನೂನು ನಿಯಮಗಳನ್ನು ಮುರಿಯುತ್ತಿದ್ದಾರೆ ಎಂದು ರಾಖಿ ಆರೋಪಿಸಿದ್ದಾರೆ.

ದೆಹಲಿ ಜನತೆ ನಂಬಿಕೆ ಇಟ್ಟು, ಕೇಜ್ರಿವಾಲ್‌ಗೆ ಅಧಿಕಾರ ನೀಡಿದ್ದರೆ, ಆಪ್ ಪಕ್ಷ ಅದನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ರಾಖಿ ಆಪಾದಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement