ಪ್ರಬಂಧ ಸ್ಪರ್ಧೆ ವಿಜೇತರಿಗೆ ಅಭಿನಂದನೆ
ಬೆಂಗಳೂರು: ಟಾಟಾ ಸಮೂಹ ತನ್ನ 'ಟಾಟಾ ಬಿಲ್ಡಿಂಗ್ ಇಂಡಿಯಾ ಶಾಲಾ ಪ್ರಬಂಧ ಸ್ಪರ್ಧೆ' 2012-13ನೇ ಸಾಲಿನ ಕರ್ನಾಟಕದ ವಿಜೇತರನ್ನು ಶುಕ್ರವಾರ ಸನ್ಮಾನಿಸಿತು.
'ವಿಜ್ಞಾನ ಮತ್ತು ತಂತ್ರಜ್ಞಾನಗಳು ಹೇಗೆ ಭವಿಷ್ಯವನ್ನು ಬದಲಿಸಲಿವೆ' ಎಂಬ ವಿಷಯದ ಕುರಿತು ಪ್ರಬಂಧ ಸ್ಪರ್ಧೆ ನಡೆದಿತ್ತು. ಕೌಶಲ್ಯ ಮತ್ತು ವಿಷಯ ಮಂಡನೆ ಆಧರಿಸಿ ವಿಜೇತರನ್ನು ಆಯ್ಕೆ ಮಾಡಲಾಗಿದೆ. ಒಟ್ಟು 15 ನಗರಗಳಲ್ಲಿ ಸ್ಪರ್ಧೆ ಆಯೋಜನೆಗೊಂಡಿತ್ತು. ಇದರಲ್ಲಿ 3 ನಗರಗಳಲ್ಲಿ ಇಂಗ್ಲಿಷ್‌ನಲ್ಲಿ ಹಾಗೂ 12 ನಗರಗಳಲ್ಲಿ ಕನ್ನಡದಲ್ಲಿ ಸ್ಪರ್ಧೆ ನಡೆಸಲಾಗಿತ್ತು.