3ನೇ ಏಕದಿನ ಪಂದ್ಯ 'ಟೈ'ನಲ್ಲಿ ಅಂತ್ಯ
ನ್ಯೂಜಿಲೆಂಡ್ ವಿರುದ್ಧ 3ನೇ ಏಕದಿನ ಪಂದ್ಯ ರೋಚಕ ಅಂತ್ಯದಲ್ಲಿ ಟೈ ಆಗಿದೆ.
ಆಕ್ಲೆಂಡ್: ನ್ಯೂಜಿಲೆಂಡ್ ವಿರುದ್ಧ 3ನೇ ಏಕದಿನ ಪಂದ್ಯ ರೋಚಕ ಅಂತ್ಯದಲ್ಲಿ ಟೈ ಆಗಿದೆ.
ಆಕ್ಲೆಂಡ್ನಲ್ಲಿ ನಡೆಯುತ್ತಿರುವ 3ನೇ ಪಂದ್ಯದ ಕೊನೆಯ ಐದು ಓವರ್ ರೋಚಕತೆಯಿಂದ ಕೂಡಿತ್ತು. ಭಾರತದ ಪರ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಉತ್ತಮ ಪ್ರದರ್ಶನ ನೀಡಿದ್ದರಿಂದ ಪಂದ್ಯ ಟೈಯಲ್ಲಿ ಅಂತ್ಯವಾಗಿದೆ.
ಮೊದಲು ಬ್ಯಾಟ್ ಮಾಡಿದ ಕಿವೀಸ್ ತಂಡ ನಿಗದಿತ 50 ಓವರ್ಗಳಲ್ಲಿ ಎಂ.ಜೆ. ಗಪ್ಟಿಲ್ ಅವರ ಶತಕದ ನೆರವಿನೊಂದಿಗೆ ನ್ಯೂಜಿಲೆಂಡ್ 314ರನ್ಗಳ ಬೃಹತ್ ಮೊತ್ತ ಕಲೆ ಹಾಕಿತು.
ನ್ಯೂಜಿಲೆಂಡ್ ತಂಡದ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಭಾರತದ ಬ್ಯಾಟ್ಸ್ಮನ್ಗಳು ನ್ಯೂಜಿಲೆಂಡ್ನ ವೇಗಿಗಳ ಮಾರಕ ದಾಳಿಗೆ ತತ್ತರಿಸಿದರು. ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದ ಶಿಖರ್ ಧವನ್ 28 ರನ್ ಗಳಿಸಿ ಆ್ಯಂಡರ್ಸನ್ಗೆ ವಿಕೆಟ್ ಒಪ್ಪಿಸಿದರು. ನಂತರ ಕಣಕ್ಕೆ ಇಳಿದ ವಿರಾಟ್ ಕೊಹ್ಲಿ ಕೇವಲ 6 ರನಗಳಿಸಲಷ್ಟೇ ಶಕ್ತರಾದರು.
39 ರನ್ ಗಳಿಸಿ ಉತ್ತಮ ಆಟ ಪ್ರದರ್ಶಿಸುತ್ತಿದ್ದ ರೋಹಿತ್ ಶರ್ಮಾ ಸಹ ಕೊಹ್ಲಿಯನ್ನೇ ಅನುಸರಿಸಿದರು. ಆನಂತರ ಬಂದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು. ಆದರೆ ಆ್ಯಂಡರ್ಸನ್ಗೆ ದಾಳಿಗೆ ಧೋನಿ ಸಹ ಮಂಕಾದರು.
ಕೊನೆಯಲ್ಲಿ ಬಂದ ಬೌಲರ್ ಗಳು ಭಾರತದ ಸೋಲಿನ ದಿಕ್ಕನ್ನೇ ಬದಲಿಸಿದರು. ಆದರೆ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಉತ್ತಮ ಪ್ರದರ್ಶನದಿಂದ ಭಾರತ ಗೆಲ್ಲುವ ಭರವಸೆ ಮೂಡಿಸಿತ್ತು. ಆದರೆ ಕಡೇಗೆ ಪಂದ್ಯ ಟೈನಲ್ಲಿ ಅಂತ್ಯವಾಗಿದೆ.