ಐವರು ಶಾಸಕರಿಗೆ ಲೋಕಾಯುಕ್ತ ನೋಟಿಸ್
ಆಸ್ತಿ ವಿವರ ಸಲ್ಲಿಸಿದ ಐವರು ಶಾಸಕರಿಗೆ ಲೋಕಾಯುಕ್ತರು ಶನಿವಾರ ನೋಟಿಸ್ ಜಾರಿ ಮಾಡಿದ್ದಾರೆ. ಅಲ್ಲದೆ ಆಸ್ತಿ ವಿವರ..
ಬೆಂಗಳೂರು: ಆಸ್ತಿ ವಿವರ ಸಲ್ಲಿಸಿದ ಐವರು ಶಾಸಕರಿಗೆ ಲೋಕಾಯುಕ್ತರು ಶನಿವಾರ ನೋಟಿಸ್ ಜಾರಿ ಮಾಡಿದ್ದಾರೆ. ಅಲ್ಲದೆ ಆಸ್ತಿ ವಿವರ ಸಲ್ಲಿಸದಿದ್ದರೆ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಆಸ್ತಿ ವಿವರ ಸಲ್ಲಿಸದ ಸಚಿವ ರೋಷನ್ ಬೇಗ್ ಹಾಗೂ ಶಾಸಕರಾದ ಸಿ.ಪಿ.ಯೋಗೇಶ್ವರ್, ಮೊಹಿಯುದ್ದೀನ್ ಬಾವಾ, ಕೆ.ಶ್ರೀನಿವಾಸ್ ಮೂರ್ತಿ ಮತ್ತು ಮುನಿರತ್ನ ಅವರಿಗೆ ಲೋಕಾಯುಕ್ತರು ನೋಟಿಸ್ ಜಾರಿ ಮಾಡಿದ್ದಾರೆ.
ಈ ಶಾಸಕರು 2013 ಜೂ.30ರೊಳಗೆ ಆಸ್ತಿ ವಿವರ ಸಲ್ಲಿಸಬೇಕಿತ್ತು. ಇದಲ್ಲದೆ ಎರಡು ತಿಂಗಳ ಕಾಲಾವಕಾಶ ನೀಡಲಾಗಿತ್ತು. ಆದರೂ ಆಸ್ತಿ ವಿವರ ಸಲ್ಲಿಸದ ಸಚಿವ ಹಾಗೂ ಶಾಸಕರ ವಿರುದ್ಧ ಕಠಿಣ ಕ್ರಮಕ್ಕೆ ಲೋಕಾಯುಕ್ತರು ಮುಂದಾಗಿದ್ದು, ಐಪಿಸಿ ಸೆಕ್ಷನ್ 176ರಡಿ ಕ್ರಿಮಿನಲ್ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದ್ದಾರೆ. ಸೆಕ್ಷನ್ 176ರಡಿ 6 ತಿಂಗಳ ಜೈಲು ಶಿಕ್ಷೆಗೆ ಅವಕಾಶವಿದೆ.