ಭಾರತಕ್ಕೆ ಗೆಲ್ಲಲು 315 ರನ್‌ಗಳ ಬೃಹತ್ ಸವಾಲು
ನ್ಯೂಜಿಲೆಂಡ್‌ನಲ್ಲಿ ನಡೆಯುತ್ತಿರುವ 3ನೇ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಗೆಲ್ಲಲು 315 ರನ್‌ಗಳ ಬೃಹತ್ ಸವಾಲನ್ನು ನ್ಯೂಜಿಲೆಂಡ್ ನೀಡಿದೆ...
ಆಕ್ಲೆಂಡ್: ನ್ಯೂಜಿಲೆಂಡ್‌ನಲ್ಲಿ ನಡೆಯುತ್ತಿರುವ 3ನೇ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಗೆಲ್ಲಲು 315 ರನ್‌ಗಳ ಬೃಹತ್ ಸವಾಲನ್ನು ನ್ಯೂಜಿಲೆಂಡ್ ನೀಡಿದೆ.
ನ್ಯೂಜಿಲೆಂಡ್ ವಿರುದ್ಧ ಸತತ ಸೋಲಿನಿಂದ ಕಂಗಾಲಾಗಿರುವ ಭಾರತಕ್ಕೆ 3ನೇ ಏಕದಿನ ಪಂದ್ಯದಲ್ಲೂ ನ್ಯೂಜಿಲೆಂಡ್ ಬೃಹತ್ ಮೊತ್ತ ನೀಡಿದೆ. ನ್ಯೂಜಿಲೆಂಡ್ ತಂಡದ ಆಟಗಾರ ಎಂ.ಜೆ ಗಪ್ಟಿಲ್ ಅವರ 111 ರನ್‌ಗಳ ನೆರವಿನೊಂದಿಗೆ ನಿಗದಿತ 50 ಓವರ್‌ಗಳಲ್ಲಿ ನ್ಯೂಜಿಲೆಂಡ್ 314 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ.
ಭಾರತ ಪರ ಶಮೀ ಅಹಮದ್, ರವೀಂದ್ರ ಜಡೇಜಾ ತಲಾ 2 ವಿಕೆಟ್ ಪಡೆದಿದ್ದಾರೆ.