65ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆ, ಸೇನಾ ಪಡೆಗಳಿಂದ ಆಕರ್ಷಕ ಪಥ ಸಂಚಲನ
ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು 65ನೇ ಗಣರಾಜ್ಯೋತ್ಸವದ ಧ್ವಜಾರೋಹಣ ಭಾನುವಾರ ಮಾಡಿದರು...
ನವದೆಹಲಿ: ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು 65ನೇ ಗಣರಾಜ್ಯೋತ್ಸವದ ಧ್ವಜಾರೋಹಣ ಭಾನುವಾರ ಮಾಡಿದರು.
ಒಂದಡೆ ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಸೇನಾ ಪರಾಕ್ರಮಗಳನ್ನು ಪ್ರದರ್ಶಿಸುವ ಟ್ಯಾಬ್ಲೋಗಳು, ಮತ್ತೊಂದೆಡೆ ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಸೇರಿದ ಸಾವಿರಾರು ಮಂದಿ ಭಾಗವಹಿಸಿದ್ದು, ಕೆಂಪುಕೋಟೆಯಲ್ಲಿ 65ನೇ ಗಣರಾಜ್ಯೋತ್ಸವ ಅದ್ಧೂರಿಯಾಗಿ ನಡೆಯಿತು.
ಅತ್ಯಂತ ವೈಭವಯುತ ಪಥಸಂಚಲನಕ್ಕೆ ಮುಖ್ಯ ಅಥಿತಿಯಾಗಿ ಜಪಾನ್ ಪ್ರಧಾನಿ ಶಿಂಜೋ ಅಬೆ, ಪ್ರಧಾನಿ ಮನಮೋಹನ್ಸಿಂಗ್ ಇತರೆ ರಾಜಕೀಯ ನಾಯಕರು ಸಾಕ್ಷಿಯಾದರು.
ಗಣರಾಜ್ಯೋತ್ಸವ ಉಗ್ರರ ಭೀತಿ ಇರುವುದರಿಂದ ರಾಷ್ಟ್ರ ರಾಜಧಾನಿ ದೆಹಲಿಯಾದ್ಯಂತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಭಾರತೀಯ ವಾಯುಪಡೆಯ ಮಾನವ ರಹಿತ ಯುದ್ಧ ವಿಮಾನಗಳು(ಡ್ರೋನ್), ಬೆಳಗ್ಗೆಯಿಂದ ಬಾನಿನಲ್ಲಿ ಕಣ್ಗಾವಲಿಡುತ್ತಿದೆ. ಅರೆಮಿಲಿಟರಿ ಪಡೆಯ 50 ಸಾವಿರಕ್ಕೂ ಹೆಚ್ಚಿನ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.
45 ಸಾವಿರ ಶಸ್ತ್ರಸಜ್ಜಿತ ದೆಹಲಿ ಪೊಲೀಸ್ ಸಿಬ್ಬಂದಿ 5 ಸಾವಿರ ಅರೆಮಿಲಿಟರಿ ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ದೆಹಲಿಯಲ್ಲಿ ಗಸ್ತು ತಿರುಗುತ್ತಿದ್ದಾರೆ.