ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕ್ರಿಕೆಟರ್ ಹರ್ಭಜನ್ ಸಿಂಗ್ ನೇಮ್ಕಿನ್ ಮಾರಲು ನಿರ್ಧರಿಸಿದ್ದೇಕ್ಕೆ?

ಭಾರತ ಕ್ರಿಕೆಟ್ ತಂಡದ ಸ್ಪೀನ್ ಮಾಂತ್ರಿಕ ಹರ್ಭಜನ್ ಸಿಂಗ್ ಅವರು ಕ್ರಿಕೆಟ್ ಹೊರತಾಗಿ ಮತ್ತೆನನ್ನೋ ಮಾಡುವ ಹವಣಿಕೆಯಲ್ಲಿದ್ದಾರೆಂಬ ಸುದ್ದಿ...

Vishwanath S
Updated On : 26 Jan 2014, 6:44 am

ಮುಂಬೈ: ಭಾರತ ಕ್ರಿಕೆಟ್ ತಂಡದ ಸ್ಪೀನ್ ಮಾಂತ್ರಿಕ ಹರ್ಭಜನ್ ಸಿಂಗ್ ಅವರು ಕ್ರಿಕೆಟ್ ಹೊರತಾಗಿ ಮತ್ತೆನನ್ನೋ ಮಾಡುವ ಹವಣಿಕೆಯಲ್ಲಿದ್ದಾರೆಂಬ ಸುದ್ದಿ ಇದೀಗ ಕುತೂಹಲಕ್ಕೆ ಕಾರಣವಾಗಿದೆ.

ಇದಕ್ಕೂ ಪೂರಕವೆಂಬಂತೆ ಹರ್ಭಜನ್ ಸಿಂಗ್ ಅವರು ಕಲರ್ಸ್ ಟೆಲಿವಿಷನ್‌ನಲ್ಲಿ ಮೂಡಿಬರಲಿರುವ ವಿನೂತನ ಕಾರ್ಯಕ್ರಮ 'ಮಿಷನ್ ಸಪ್ನೆ'ಯಲ್ಲಿ ಭಾಗವಹಿಸಲಿದ್ದು, ಕಾರ್ಯಕ್ರಮದಲ್ಲಿ ಸಿಂಗ್ ಸಿಹಿತಿನಿಸು ಮತ್ತು ನೇಮ್ಕಿನ್ ಮಾರಲು ಸಿದ್ಧರಾಗಿದ್ದಾರೆ? ಹೌದು ಅನ್ನುತ್ತಿದೆ ಕೆಲ ಮೂಲಗಳು.

ಜೀವನ ಹೋರಾಟದ ದಾರಿಯಲ್ಲಿ ಸೋತು ಬೆಂಡಾಗಿ. ಜೀವನವನ್ನೇ ಕೊನೆಗೊಳಿಸಿಕೊಳ್ಳಲು ಆಲೋಚಿಸು ಸಾಮಾನ್ಯ ಮನುಷ್ಯನಿಗಾಗಿ ಹಣ ಸಂಗ್ರಹಿಸಲು ಇದೇ ಮೊದಲ ಬಾರಿಗೆ ಕಲರ್ಸ್ ಟೆಲಿವಿಷನ್‌ನಲ್ಲಿ ನೂತನ ಕಾರ್ಯಕ್ರಮವನ್ನು ರೂಪಿಸಿದೆ.

ಸಾಮಾನ್ಯ ಮನುಷ್ಯನಿಗಾಗಿ ಹಣ ಸಂಗ್ರಹಿಸುವ ಕಾರ್ಯಕ್ರಮದಲ್ಲಿ ಭಜ್ಜಿ ಸಹ ಕೈ ಜೋಡಿಸಲಿದ್ದು, ಈ ಶೋನಲ್ಲಿ ಭಜ್ಜಿ ತಮ್ಮ ಬುದ್ಧಿ ಉಪಯೋಗಿಸಿ ಪದಾರ್ಥಗಳನ್ನು ಮಾರಲಿದ್ದಾರೆ.

ಅಲ್ಲದೆ ಈ ಶೋನಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್, ವರುಣ್ ಧವನ್, ಮಿಲ್ಕಾ ಸಿಂಗ್ ಸಹ ಭಾಗವಹಿಸುವ ಸಾಧ್ಯತೆಯಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement