ಡಬ್ಬಿಂಗ್ ವಿರೋಧಿಸಿ ಕಲಾವಿದರ ಸುದ್ದಿಗೋಷ್ಟಿ
ವ್ಯಾಪಾರ ದೃಷ್ಟಿಯಿಂದ ಡಬ್ಬಿಂಗ್ ಬೇಡ ಎಂದು ನಟ ರವಿಚಂದ್ರನ್ ಭಾನುವಾರ ಹೇಳಿದ್ದಾರೆ...
ಬೆಂಗಳೂರು: ವ್ಯಾಪಾರ ದೃಷ್ಟಿಯಿಂದ ಡಬ್ಬಿಂಗ್ ಬೇಡ ಎಂದು ನಟ ರವಿಚಂದ್ರನ್ ಭಾನುವಾರ ಹೇಳಿದ್ದಾರೆ.
ಡಬ್ಬಿಂಗ್ ವಿರೋಧಿಸಿ ನಾಳೆ ನಡೆಯಲಿರುವ ಚಿತ್ರೊದ್ಯಮ ಬಂದ್ ಕುರಿತು ಇಂದು ಕಲಾವಿದರು ಸುದ್ದಿಗೋಷ್ಟಿ ನಡೆಸಿದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರವಿಚಂದ್ರನ್ , ವ್ಯಾಪಾರ ದೃಷ್ಟಿಯಿಂದ ಡಬ್ಬಿಂಗ್ ಬೇಡ. ಇದು ಹೇಗೆ ಚಿತ್ರರಂಗಕ್ಕೆ ಬಂತೋ ಗೊತ್ತಿಲ್ಲ. ಕನ್ನಡ ಚಿತ್ರಗಳಿಗೆ ಚಿತ್ರಮಂದಿರ ಸಿಗ್ತಾನೆ ಇಲ್ಲ ಡಬ್ಬಿಂಗ್ ಭೂತ ಸ್ಲೋ ಪಾಯಸನ್ ಇದ್ದಂತೆ ಎಂದು ತಿಳಿಸಿದ್ದಾರೆ.
ನಟ ಜಗ್ಗೇಶ ಮಾತನಾಡಿ ಡಬ್ಬಿಂಗ್ ಭೂತ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿದಂತೆ. ಡಬ್ಬಿಂಗ್ ವಿರೋಧಿಸುವವರನ್ನು ಬೆಪ್ಪರು ಅಂತಿದ್ದಾರೆ. ನಾವು ಬೆಪ್ಪಾರಾದ್ರು ಸರಿ ಹೋರಾಟ ನಿಲ್ಲಿಸಲ್ಲ ಎಂದಿದ್ದಾರೆ.
ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರು ಮಾತನಾಡಿ, ಕನ್ನಡವನ್ನಾ ನಾವೇ ಬೆಳೆಸಬೇಕು, ನಾವು ಅದಕ್ಕಾಗಿ ಹೋರಾಡಬೇಕು. ನಮ್ಮದು ಕನ್ನಡ ಕುಟುಂಬ. ನಾವು ಕನ್ನಡಕ್ಕಾಗಿ ಹೋರಾಡಬೇಕು ಎಂದು ಹೇಳಿದ್ದಾರೆ.