ದೋಣಿ ದುರಂತ, 22 ಸಾವು
ಅಂಡಮಾನ್ನ ಪೋರ್ಟ್ಬ್ಲೇರ್ನಲ್ಲಿ ಪ್ರವಾಸಿಗರು ತೆರಳುತ್ತಿದ್ದ ದೋಣಿ ಮುಳುಗಡೆಗೊಂಡು 22 ಮಂದಿ ಜಲ ಸಮಾಧಿಯಾಗಿದ್ದಾರೆ...
ಅಂಡಮಾನ್: ಅಂಡಮಾನ್ನ ಪೋರ್ಟ್ಬ್ಲೇರ್ನಲ್ಲಿ ಪ್ರವಾಸಿಗರು ತೆರಳುತ್ತಿದ್ದ ದೋಣಿ ಮುಳುಗಡೆಗೊಂಡು 22 ಮಂದಿ ಜಲ ಸಮಾಧಿಯಾಗಿದ್ದಾರೆ.
ಮರಿನಾ ದೋಣಿಯಲ್ಲಿ ತಮಿಳುನಾಡಿನ ಕಂಚೀಪುರದಿಂದ 46 ಪ್ರವಾಸಿಗರ ತಂಡ ತೆರಳಿತ್ತು. ಸಂಜೆ 4 ಗಂಟೆಯ ಸುಮಾರಿನಲ್ಲಿ ಈ ದುರಂತ ಸಂಭವಿಸಿದ್ದು, 22 ಮಂದಿ ಮೃತಪಟ್ಟಿದ್ದಾರೆ. ಇನ್ನುಳಿದಂತೆ 18 ಮಂದಿಯನ್ನು ಈಗಾಗಲೇ ರಕ್ಷಿಸಲಾಗಿದೆ ಎಂದು ಅಂಡಮಾನ್ ನಿಕೋಬಾರ್ ಉಪ ರಾಜ್ಯಪಾಲ ಎ.ಕೆ. ಸಿಂಗ್ ತಿಳಿಸಿದ್ದಾರೆ.
ದುರಂತದಲ್ಲಿ ನಾಪತ್ತೆಯಾಗಿರುವವರಿಗಾಗಿ ಶೋಧ ಕಾರ್ಯ ನಡೆಯುತ್ತಿದ್ದು, ಇದಕ್ಕಾಗಿ ರಕ್ಷಣಾ ಸಿಬ್ಬಂದಿ ಹೆಲಿಕಾಫ್ಟರ್ ಅನ್ನು ಬಳಸಿಕೊಳ್ಳುತ್ತಿದ್ದಾರೆ. ಕಾರ್ಯಚರಣೆ ವೇಳೆ ಸುಮಾರು 21 ಮಂದಿ ಮೃತದೇಹಗಳನ್ನು ಈಗಾಗಲೇ ಹೊರತೆಗೆಯಲಾಗಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ.
ದುರಂತಕ್ಕೆ ನಿಕರ ಕಾರಣವೇನು ಎಂಬುದು ತಿಳಿದುಬಂದಿಲ್ಲ. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಕರೆದೊಯ್ಯುತ್ತಿದದ್ದೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ.
ದುರಂತದಲ್ಲಿ ಮೃತರ ಕುಟುಂಬಗಳಿಗೆ ತಲಾ 1 ಲಕ್ಷ ಪರಿಹಾರವನ್ನು ಅಂಡಮಾನ್ ಸರ್ಕಾರ ಘೋಷಿಸಿದೆ.