ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಅಣ್ಣಾ ಸಲಹೆ ಮೇರೆಗೆ ಬಿನ್ನಿ ಉಪವಾಸ ಅಂತ್ಯ

ಇಂದು ಬೆಳಗ್ಗೆ ಎಎಪಿ ಸರ್ಕಾರದ ವಿರುದ್ಧ ಅಮರಣಾಂತ ಉಪವಾಸ ಆರಂಭಿಸಿದ್ದ ಎಎಪಿಯ ಉಚ್ಚಾಟಿತ ಶಾಸಕ ವಿನೋದ್ ಕುಮಾರ್ ಬಿನ್ನಿ ಅವರು..

Lingaraj Badiger
Updated On : 27 Jan 2014, 7:40 am

ನವದೆಹಲಿ: ಇಂದು ಬೆಳಗ್ಗೆ ಎಎಪಿ ಸರ್ಕಾರದ ವಿರುದ್ಧ ಅಮರಣಾಂತ ಉಪವಾಸ ಆರಂಭಿಸಿದ್ದ ಎಎಪಿಯ ಉಚ್ಚಾಟಿತ ಶಾಸಕ ವಿನೋದ್ ಕುಮಾರ್ ಬಿನ್ನಿ ಅವರು ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಅವರ ಸಲಹೆ ಮೇರೆಗೆ ತಮ್ಮ ಉಪವಾಸವನ್ನು ಕೈ ಬಿಟ್ಟಿದ್ದಾರೆ.

ತಮ್ಮ ವಿರುದ್ಧ ಪಕ್ಷ ತೆಗೆದುಕೊಂಡ ಕ್ರಮವನ್ನು ವಿರೋಧಿಸಿ ಹಾಗೂ ಚುನಾವಣೆ ವೇಳೆ ಎಎಪಿ ಸರ್ಕಾರ ನೀಡಿದ್ದ ಭರವಸೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಬಿನ್ನಿ ಇಂದು ಬೆಳಗ್ಗೆ ದೆಹಲಿಯ ಜಂತರ್ ಮಂತರ್‌ನಲ್ಲಿ ಅಮರಣಾಂತ ಉಪವಾಸ ಆರಂಭಿಸಿದ್ದರು. ಅಲ್ಲದೆ 10 ದಿನದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಎಲ್ಲಾ ಭರವಸೆಗಳನ್ನು ಈಡೇರಿಸಬೇಕು ಎಂದು ಗಡುವು ನೀಡಿದ್ದರು. ಆದರೆ ಉಪವಾಸ ಆರಂಭಿಸಿದ ಕೆಲವೇ ಗಂಟೆಗಳಲ್ಲಿ ಹೋರಾಟವನ್ನು ಅಂತ್ಯಗೊಳಿಸಿದ್ದಾರೆ.

ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ಕೇಜ್ರಿವಾಲ್ ಸರ್ಕಾರಕ್ಕೆ ಕಾಲಾವಕಾಶ ಬೇಕು ಎಂದು ಅಣ್ಣಾ ಹಜಾರೆ ಮತ್ತು ದೆಹಲಿ ಉಪರಾಜ್ಯಪಾಲ ನಜೀಬ್ ಜಂಗ್ ಅವರು ತಮಗೆ ಸಲಹೆ ನೀಡಿದ್ದಾರೆ. ಹೀಗಾಗಿ ತಾವು ಉಪವಾಸ ಕೈ ಬಿಟ್ಟಿರುವುದಾಗಿ ಬಿನ್ನಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಧರಣಿಗೂ ಮುನ್ನ ನಜೀಬ್ ಜಂಗ್ ಅವರನ್ನು ಭೇಟಿ ಮಾಡಿದ್ದ ಬಿನ್ನಿ, ಕಾನೂನು ಸಚಿವ ಸೋಮನಾಥ್ ಭಾರ್ತಿಯವರ ಮಧ್ಯರಾತ್ರಿ ದಾಳಿ ಸೇರಿದಂತೆ ಎಎಪಿ ಸರ್ಕಾರದಲ್ಲಿ ನಡೆಯುತ್ತಿರುವ ಪ್ರಸ್ತುತ ಘಟನಾವಳಿಗಳ ಬಗ್ಗೆ ಮಾಹಿತಿ ನೀಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement