ಆಡಿಸಿದಾತನ ಬಣ್ಣದ ಆಟ!
ಕಪ್ಪು ಬಿಳುಪು ಸುಂದರಿಯನ್ನು ವರ್ಣರಂಜಿತವಾಗಿ ನೋಡುವ ಭಾಗ್ಯ !
ಕಪ್ಪು ಬಿಳುಪು ಸುಂದರಿಯನ್ನು ವರ್ಣರಂಜಿತವಾಗಿ ನೋಡುವ ಭಾಗ್ಯ !
ಕನ್ನಡ ಚಿತ್ರರಂಗದಲ್ಲಿ 'ತ್ಯಾಗಮಯಿ' ನಾಯಕನ ಪಾತ್ರದ ಶಕೆಯನ್ನು ಆರಂಭಿಸಿದ ಡಾ. ರಾಜಕುಮಾರ್ ನಟಿಸಿದ ಕಸ್ತೂರಿ ನಿವಾಸ ಕಪ್ಪು ಬಿಳುಪಿನಲ್ಲಿ ಚಿತ್ರಿತ ಸಿನಿಮಾ ಆಗಿತ್ತು. ಆದರೆ ಈ ಚಿತ್ರವೀಗ ಡಾ. ರಾಜಕುಮಾರ್ ಹುಟ್ಟುಹಬ್ಬವಾದ ಏಪ್ರಿಲ್ ೨೪ ರಂದು ಬಣ್ಣದಲ್ಲಿ ತೆರೆಕಾಣಲಿದೆ. ಚಿತ್ರದ ನಿರ್ಮಾಪಕ ಕೆ.ಸಿ. ಎನ್ ಗೌಡರಿಗೆ ಈ 'ವರ್ಣಮಯ' ಕನಸು ಬಿದ್ದಿತ್ತು, ಅದಕ್ಕಾಗಿ ಗೌಡರು ಸಿಕ್ಕಾಪಟ್ಟೆ ಹಣವನ್ನು ವ್ಯಯ ಮಾಡಿದ್ದರು. ಆದರೆ ಗೌಡರು ಆ ಕನಸು ನನಸಾಗುವ ಮುನ್ನವೇ ತೀರಿಕೊಂಡ ಕಾರಣ ತಂದೆಯ ಆಸೆಯನ್ನು ಪುತ್ರ, ನಿರ್ಮಾಪಕ ಕೆ.ಸಿ. ಎನ್ ಮೋಹನ್ ಈಡೇರಿಸಿದ್ದಾರೆ.
ಆಡಿಸಿದಾತನ ಬಣ್ಣದ ಆಟವನ್ನು ನೋಡಲು ಏಪ್ರಿಲ್ ೨೪ರ ವರೆಗೆ ಕಾಯಬೇಕಷ್ಟೇ !
'ಕಸ್ತೂರಿ ನಿವಾಸ' ಕಲರ್ ಚಿತ್ರದ ಸ್ಟಿಲ್ಸ್