ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ನಕ್ಸಲರಿಂದ ನೆಲಬಾಂಬ್ ಸ್ಫೋಟ: 12 ಯೋಧರಿಗೆ ಗಾಯ

ಜಾರ್ಖಂಡ್‌ನ ಗಿರಿಧಾ ಜಿಲ್ಲೆಯಲ್ಲಿ ನಕ್ಸಲರು ಸೋಮವಾರ ಭದ್ರತಾ ಪಡೆಯ ವಾಹನಗಳನ್ನು ಗುರಿಯಾಗಿಸಿಕೊಂಡು ಹಲವು ..

Lingaraj Badiger
Updated On : 27 Jan 2014, 7:38 am

ರಾಂಚಿ: ಜಾರ್ಖಂಡ್‌ನ ಗಿರಿಧಾ ಜಿಲ್ಲೆಯಲ್ಲಿ ನಕ್ಸಲರು ಸೋಮವಾರ ಭದ್ರತಾ ಪಡೆಯ ವಾಹನಗಳನ್ನು ಗುರಿಯಾಗಿಸಿಕೊಂಡು ಹಲವು ನೆಲಬಾಂಬ್‌ಗಳನ್ನು ಸ್ಫೋಟಿಸಿದ್ದು, ಕನಿಷ್ಠ 12 ಯೋಧರು ತೀವ್ರವಾಗಿ ಗಾಯಗೊಂಡಿದ್ದಾರೆ.

ಸುದ್ದಿಸಂಸ್ಥೆಯ ಪ್ರಕಾರ, ಜಿಲ್ಲೆಯ ಡೊಲ್ಕೋಟಾ ಪ್ರದೇಶದಲ್ಲಿ ಸುಮಾರು 7 ಐಇಡಿ ಬಾಂಬ್‌ಗಳನ್ನು ನಕ್ಸಲರು ಸ್ಫೋಟಿಸಿದ್ದಾರೆ. ಘಟನೆಯಲ್ಲಿ ನಾಲ್ವರು ರಾಜ್ಯ ಪೊಲೀಸರು ಹಾಗೂ 8 ಮಂದಿ ಕೇಂದ್ರ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿ ಗಾಯಗೊಂಡಿದ್ದಾರೆ.

ಕಳೆದ ವಾರ ನಕ್ಸಲರು ಅಪಹರಣ ಮಾಡಿರುವ ಐವರು ಸರ್ಕಾರಿ ನೌಕರರ ಪತ್ತೆಗಾಗಿ ಪೊಲೀಸರು ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ನೆಲಬಾಂಬ್ ಸ್ಫೋಟಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement