ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಅಳಗಿರಿ ಹೇಳಿಕೆ ಪಕ್ಷ ವಿರೋಧಿ ಧೋರಣೆ: ಕರುಣಾನಿಧಿ

ತಮ್ಮ ಪುತ್ರ ಅಳಗಿರಿ ಅವರನ್ನು ಡಿಎಂಕೆ ಪಕ್ಷದಿಂದ ಅಮಾನತು ಮಾಡಿರುವುದನ್ನು ಸಮರ್ಥಿಸಿಕೊಂಡಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ...

Vishwanath S
Updated On : 28 Jan 2014, 8:20 am

ಚೆನ್ನೈ: ತಮ್ಮ ಪುತ್ರ ಅಳಗಿರಿ ಅವರನ್ನು ಡಿಎಂಕೆ ಪಕ್ಷದಿಂದ ಅಮಾನತು ಮಾಡಿರುವುದನ್ನು ಸಮರ್ಥಿಸಿಕೊಂಡಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರು, ಅಳಗಿರಿ ಹೇಳಿಕೆಯು ಪಕ್ಷ ವಿರೋಧಿ ಧೋರಣೆಯಾಗಿತ್ತು ಎಂದು ಹೇಳಿದ್ದಾರೆ.

ಚೆನ್ನೈನಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಕರುಣಾನಿಧಿ, ಅಳಗಿರಿ ಅವರನ್ನು ಅಮಾನತು ಮಾಡುವ ನಿರ್ಧಾರ ನನ್ನ ವೈಯುಕ್ತಿಕ ನಿರ್ಧಾರವಲ್ಲ. ಇದು ಡಿಎಂಕೆ ಪಕ್ಷ ತೆಗೆದುಕೊಂಡ ನಿರ್ಧಾರ. ಅಳಗಿರಿ ಅವರ ಪಕ್ಷದ ವಿರುದ್ಧ ಬಹಿರಂಗವಾಗಿ ಮಾತನಾಡುವ ಮೂಲಕ ಪಕ್ಷದ ಶಿಸ್ತನ್ನು ಉಲ್ಲಂಘಿಸಿದ್ದಾರೆ ಹೀಗಾಗಿಯೇ ಅವರನ್ನು ಅಮಾನತು ಮಾಡಲಾಗಿದೆ ಎಂದು ಕರುಣಾನಿಧಿ ಹೇಳಿದರು.

'ಡಿಎಂಕೆ ಪಕ್ಷದ ಮುಖಂಡ ಸ್ಟಾಲಿನ್ ಅವರು ಕೆಲವೇ ತಿಂಗಳಲ್ಲಿ ಸಾವನ್ನಪ್ಪುತ್ತಾರೆ ಎಂದು ಹೇಳಿರುವ ಅಳಗಿರಿ ವಿರುದ್ಧ ಕರುಣಾನಿಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಟಾಲಿನ್ ವಿರುದ್ಧ ಅಳಗಿರಿ ಇಂತಹ ಹೇಳಿಕೆ ನೀಡಿದ್ದಾರೆ. ಇದನ್ನು ಡಿಎಂಕೆ ಪಕ್ಷದ ಮುಖಂಡನಾಗಿ ಹೇಗೆ ಸಹಿಸಲು ಸಾಧ್ಯ ಎಂದಿದ್ದಾರೆ.

ಕರುಣಾನಿಧಿ ಅವರ ನಂತರ ಡಿಎಂಕೆ ಪಕ್ಷದ ಉತ್ತರಾಧಿಕಾರಿ ಸ್ಥಾನಕ್ಕಾಗಿ ಮೊದಲಿನಿಂದಲೂ ಕರುಣಾನಿಧಿ ಅವರ ಪುತ್ರರಾದ ಸ್ಟಾಲಿನ್ ಮತ್ತು ಅಳಗಿರಿ ಪೈಪೋಟಿಯಲ್ಲಿದ್ದರು. ಇತ್ತೀಚೆಗೆ ನಟ ವಿಜಯ್ ಕಾಂತ್ ಅವರ ನೇತೃತ್ವದ ಡಿಎಂಡಿಕೆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಕರುಣಾನಿಧಿ ಒಪ್ಪಿಗೆ ನೀಡದ್ದರಿಂದ ಅಳಗಿರಿ ಕರುಣಾನಿಧಿ ಅವರ ನಿರ್ಧಾರವನ್ನು ಬಹಿರಂಗವಾಗಿ ಟೀಕಿಸಿದ್ದರು. ಇದೀಗ ಪಕ್ಷದ ಮತ್ತೋರ್ವ ಮುಖಂಡ ಸ್ಟಾಲಿನ್ ವಿರುದ್ಧ ಜೀವ ಬೆದರಿಕೆ ಒಡ್ಡುವಂತಹ ಹೇಳಿಕೆ ನೀಡಿ ಕರುಣಾನಿಧಿ ಅವರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.

ಸ್ಟಾಲಿನ್ ನನ್ನು ಕೊಲ್ಲುವೆ ಎಂದಿದ್ದ ಅಳಗಿರಿ!
ತಮ್ಮ ಪುತ್ರ  ಸ್ಟಾಲಿನ್ ರನ್ನು ಕೊಲೆ ಮಾಡಲು ಮತ್ತೊಬ್ಬ ಪುತ್ರ ಅಳಗಿರಿ (ಅಣ್ಣ) ಶಪಥ ಮಾಡಿದ್ದನ್ನು ಮಾಜಿ ಮುಖ್ಯಮಂತ್ರಿ ಹಾಗೂ ಡಿ ಎಂ ಕೆ ನಾಯಕ ಕರುಣಾನಿಧಿ ಬಹಿರಂಗಪಡಿಸಿದ್ದಾರೆ .

ಜನವರಿ ೨೪ರಂದು ಮನೆಗೆ ಬಂದಿದ್ದ ಅಳಗಿರಿ, ಸ್ಟಾಲಿನ್ ಕುರಿತು ತೀವ್ರವಾದ ಸಿಟ್ಟಿನಿಂದ ಆಕ್ರೋಶದಿಂದ  ಬೇಕಾಬಿಟ್ಟಿ ಬಾಯಿಗೆ ಬಂದಂತೆ ಮಾತನಾಡಿದ್ದಲ್ಲದೆ, ಇನ್ನು ೩ ತಿಂಗಳಲ್ಲಿ ಸ್ಟಾಲಿನ್ ರನ್ನು ಮುಗಿಸುವುದಾಗಿ ಹೇಳಿದ . ಆಗ ನಾನು ಕಕ್ಕಾಬಿಕ್ಕಿಯಾದೆ . ಪರಸ್ಪರ ಸೌಹರ್ದದಿಂದ ಬದುಕಲು ಕೇಳಿಕೊಂಡೆ. ಆದರೆ ಅಳಗಿರಿ ಕೇಳಲಿಲ್ಲ . ಅದೇ ಕಾರಣಕ್ಕೆ ಪಕ್ಷದಿಂದ ಹೊರಹಾಕುವ ನಿರ್ಧಾರ ಮಾಡಲಾಯಿತು ಎಂದು ಕರುಣಾನಿಧಿ ಹೇಳಿದ್ದಾರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement