ನ್ಯೂಜಿಲೆಂಡ್‌ಗೆ 279 ರನ್ ಗುರಿ
ನ್ಯೂಜಿಲೆಂಡ್ ವಿರುದ್ಧದ 4ನೇ ಏಕದಿನ ಪಂದ್ಯದಲ್ಲಿ ಭಾರತ 278 ರನ್ ಕಲೆ ಹಾಕಿದೆ...
ಹ್ಯಾಮಿಲ್ಟನ್: ನ್ಯೂಜಿಲೆಂಡ್ ವಿರುದ್ಧದ 4ನೇ ಏಕದಿನ ಪಂದ್ಯದಲ್ಲಿ ಭಾರತ 278 ರನ್ ಕಲೆ ಹಾಕಿದೆ.
ಹ್ಯಾಮಿಲ್ಟನ್‌ನಲ್ಲಿ ನಡೆಯುತ್ತಿರುವ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 278 ರನ್‌ಗಳನ್ನು ಕಲೆಹಾಕಿದ್ದು, ನ್ಯೂಜಿಲೆಂಡ್‌ಗೆ ಗೆಲ್ಲಲು 279 ರನ್‌ಗಳ ಸಾಧಾರಣ ಮೊತ್ತ ನೀಡಿದೆ.
ಭಾರತ ಪರ ರೋಹಿತ್ ಶರ್ಮಾ 79, ಮಹೇಂದ್ರ ಸಿಂಗ್ ಧೋನಿ ಅಜೇಯ 79, ರವೀಂದ್ರ ಜಡೇಜಾ 62 ರನ್ ಗಳಿಸಿದ್ದಾರೆ.
ನ್ಯೂಜಿಲೆಂಡ್ ಪರ ಟಿಮ್ ಸೌಥೀ 2 ವಿಕೆಟ್ ಕಬಳಿಸಿದ್ದಾರೆ.