ಶೇ.0.25 ರಷ್ಟು ರೆಪೋ ದರ ಹೆಚ್ಚಳ
ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿದರವನ್ನು ಶೇ.0.25ರಷ್ಟು ಏರಿಕೆ ಮಾಡಿದ್ದು, ಗ್ರಾಹಕ ಬೆಲೆ ಸೂಚ್ಯಂಕದ ಹಣದುಬ್ಬರವನ್ನು ನಿಯಂತ್ರಿಸುವ ಉದ್ದೇಶದಿಂದ ಪಾಲಿಸಿ ರೆಪೋ ದರವನ್ನು ಶೇ.8ಕ್ಕೆ ಹೆಚ್ಚಿಸಿದೆ.
ಮೂರನೇ ತ್ರೈಮಾಸಿಕ ಅವಧಿಯ ಹಣಕಾಸು ನೀತಿ ಪರಾಮರ್ಶೆ ವೇಳೆ ಆರ್‌ಬಿಐ ಈ ನಿರ್ಧಾರ ಕೈಗೊಂಡಿದೆ. ಅಲ್ಲದೆ ನಗದು ಮೀಸಲು ಅನುಪಾತದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಆರ್‌ಬಿಐ ಮುಖ್ಯಸ್ಥ ರಘುರಾಮ್ ರಾಜನ್ ಅವರು ತಿಳಿಸಿದ್ದಾರೆ.
ಬಡ್ಡಿದರ ಹೆಚ್ಚಳದಿಂದ ಗ್ರಾಹಕರ ಇಎಂಐ ಪ್ರಮಾಣ ಸಹ ಹೆಚ್ಚಾಗಲಿದೆ. ಉತ್ಪಾದನಾ ವಲಯದ ಪ್ರಗತಿಯಲ್ಲಿ ಕುಂಠಿತವಾದ ಹಿನ್ನೆಲೆಯಲ್ಲಿ 2013-14ರ ಅವಧಿಯಲ್ಲಿ ಆರ್ಥಿಕ ಬೆಳವಣಿಗೆ ದರ ಶೇ. 5ಕ್ಕಿಂತ ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಆರ್‌ಬಿಐ ತಿಳಿಸಿದೆ.