ನಟಿ ಅನುಪ್ರಭಾಕರ್‌ರಿಂದ ವಿಚ್ಛೇದನ ಕೋರಿ ಅರ್ಜಿ
ನಟಿ ಅನುಪ್ರಭಾಕರ್ ಅವರು ತಮ್ಮ ಪತಿ ಕೃಷ್ಣಕುಮಾರ್ ಅವರಿಂದ ವಿಚ್ಛೇದನ ಕೋರಿ ಬುಧವಾರ ಕೌಟುಂಬಿಕ..
ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ಅನುಪ್ರಭಾಕರ್ ಅವರು ತಮ್ಮ ಪತಿ ಕೃಷ್ಣಕುಮಾರ್ ಅವರಿಂದ ವಿಚ್ಛೇದನ ಕೋರಿ ಬುಧವಾರ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಅನುಪ್ರಭಾಕರ್ ಹಾಗೂ ಕೃಷ್ಣಕುಮಾರ್ ಇಬ್ಬರೂ ಪರಸ್ಪರ ಒಪ್ಪಂದದ ಮೇರೆಗೆ ನಗರದ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಪರಸ್ಪರ ಕುಟುಂಬದಲ್ಲಿ ಸಾಮರಸ್ಯವಿಲ್ಲದ ಕಾರಣ ಅನುಪ್ರಭಾಕರ್ ಮತ್ತು ಕೃಷ್ಣಕುಮಾರ್ ದಂಪತಿಗಳ ನಡುವೆ ವಿರಸವೇರ್ಪಟ್ಟಿತ್ತು. ಹೀಗಾಗಿ ಕಳೆದ 1 ವರ್ಷದಿಂದ ದಂಪತಿಗಳು ಬೇರೆ ಬೇರೆ ವಾಸವಾಗಿದ್ದರು ಎಂದು ತಿಳಿದು ಬಂದಿದೆ.
ಹಿಂದೂ ವಿವಾಹ ಕಾಯ್ದೆ 13(ಬಿ) ಅಡಿಯಲ್ಲಿ ಅರ್ಜಿ ದಾಖಲಿಸಲಾಗಿದ್ದು, ಅರ್ಜಿ ನಾಳೆ ವಿಚಾರಣೆಗೆ ಬರುವ ಸಾಧ್ಯತೆ ಇದೆ.
ಹಿರಿಯ ನಟಿ ಜಯಂತಿ ಅವರ ಪುತ್ರ ಕೃಷ್ಣಕುಮಾರ್ ಅವರ ಜೊತೆ 2002ರ ಮಾರ್ಚ್‌ನಲ್ಲಿ ಅನುಪ್ರಭಾಕರ್ ಮದುವೆಯಾಗಿತ್ತು.