ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

'ಬಂಡೆ' ಸಾವು: ನಾಳೆ ಸಿಐಡಿ ತನಿಖಾ ವರದಿ ಸಲ್ಲಿಕೆ

ಕುಖ್ಯಾತ ರೌಡಿ ಮುನ್ನ ಗುಂಡೇಟಿನಿಂದ ಸಾವನ್ನಪ್ಪಿದ್ದ ಪಿಎಸ್ಐ ಮಲ್ಲಿಕಾರ್ಜುನ ಬಂಡೆ ಪ್ರಕರಣದ ತನಿಖೆಯ ಪ್ರಗತಿ ವರದಿಯನ್ನು ಸಿಐಡಿ ಗುರುವಾರ ಸರ್ಕಾರಕ್ಕೆ ಸಲ್ಲಿಸಲ್ಲಿದೆ.

Vishwanath S
Updated On : 29 Jan 2014, 2:50 am

ಬೆಂಗಳೂರು: ಕುಖ್ಯಾತ ರೌಡಿ ಮುನ್ನ ಗುಂಡೇಟಿನಿಂದ ಸಾವನ್ನಪ್ಪಿದ್ದ ಪಿಎಸ್ಐ ಮಲ್ಲಿಕಾರ್ಜುನ ಬಂಡೆ ಪ್ರಕರಣದ ತನಿಖೆಯ ಪ್ರಗತಿ ವರದಿಯನ್ನು ಸಿಐಡಿ ಗುರುವಾರ ಸರ್ಕಾರಕ್ಕೆ ಸಲ್ಲಿಸಲ್ಲಿದೆ.

ಸಿಐಡಿ ಮುಖ್ಯಸ್ಥ ಬಿಪಿನ್ ಗೋಪಾಲಕೃಷ್ಣ ಅವರ ನೇತೃತ್ವದಲ್ಲಿ ಕಳೆದ ಒಂದು ವಾರದಿಂದ ಬಂಡೆ ಸಾವಿನ ಪ್ರಕರಣದ ತನಿಖೆ ನಡೆಯುತ್ತಿದ್ದು, ವಾರದಿಂದ ಕಲೆ ಹಾಕಿರುವ ಪ್ರಾಥಮಿಕ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ.

ಈ ಸಂಬಂಧ ಮಾಧ್ಯಮದವರಿಗೆ ಮಾಹಿತಿ ನೀಡಿದ ಬಿಪಿನ್ ಗೋಪಾಲಕೃಷ್ಣ ಅವರು, ಬಂಡೆ ಪ್ರಕರಣದ ತನಿಖೆಗೆ ಸರ್ಕಾರ ಗಡುವು ನೀಡಿಲ್ಲ. ಸದ್ಯ ವಾರದಿಂದ ಕಲೆಹಾಕಿರುವ ನಾಲ್ಕು ಪುಟಗಳ ಪ್ರಾಥಮಿಕ ವರದಿಯನ್ನು ಮಾತ್ರ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಶೂಟೌಟ್ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ ಎಂದರು.

ಇನ್ನು ಮಲ್ಲಿಕಾರ್ಜುನ್ ಬಂಡೆ ತಲೆಗೆ ಬಿದ್ದ ಬುಲೆಟ್ ಪೊಲೀಸರಿಗೆ ಸಿಕ್ಕಿಲ್ಲ. ಅಲ್ಲದೆ ಬಂಡೆಗೆ ಬಿದ್ದ ಬುಲೆಟ್ ಯಾರದೆಂದು ಗೊತ್ತಾಗುತ್ತಿಲ್ಲ ಎಂದು ಬಿಪಿನ್ ಅವರು ತಿಳಿಸಿದ್ದಾರೆ.

ತನಿಖೆ ದೃಷ್ಟಿಯಿಂದ ಬಂಡೆಗೆ ಚಿಕಿತ್ಸೆ ನೀಡಿದ ಹೈದರಾಬಾದ್ನ ವೈದ್ಯರ ಹೇಳಿಕೆ ಪಡೆಯಬೇಕಿದೆ. ಅಲ್ಲದೆ ಐಜಿಪಿ ವಜೀರ್ ಅಹ್ಮದ್ ಅವರ ವಿಚಾರಣೆ. ಗುಲಬರ್ಗಾ ಸಾರ್ವಜನಿಕರ ವಿಚಾರಣೆ ಮಾಡುವ ಅಗತ್ಯವಿದೆ ಎಂದರು.

ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳೆ ಪ್ರತ್ಯಕ್ಷದರ್ಶಿಗಳು ಆಗಿರುವುದರಿಂದ ಅವರನ್ನು ವಿಚಾರಣೆಗೊಳಪಡಿಸಬೇಕಿದೆ ಎಂದರು. ಹೀಗಾಗಿ ಪ್ರಕರಣದ ಸಂಪೂರ್ಣ ವರದಿ ಸಲ್ಲಿಸಲು ಒಂದು ತಿಂಗಳು ಬೇಕಾಗುತ್ತದೆ. ಅಲ್ಲದೆ ವಿಧಿವಿಜ್ಞಾನ ಪರೀಕ್ಷಾ ವರದಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement