ವೋಲ್ವೊ ಬಸ್ ಅಪಘಾತ: 8 ಮಂದಿ ಸಜೀವ ದಹನ
ದಿನೇದಿನೆ ವೋಲ್ವೊ ಬಸ್ ದುರಂತಗಳು ಹೆಚ್ಚುತ್ತಿದ್ದು, ನಿನ್ನೆ ತಡರಾತ್ರಿ ಮತ್ತೊಂದು ವೋಲ್ವೊ ಬಸ್ ದುರಂತಕ್ಕೀಡಾಗಿದೆ. ಘಟನೆಯಲ್ಲಿ..
ಥಾಣೆ: ದಿನೇದಿನೆ ವೋಲ್ವೊ ಬಸ್ ದುರಂತಗಳು ಹೆಚ್ಚುತ್ತಿದ್ದು, ನಿನ್ನೆ ತಡರಾತ್ರಿ ಮತ್ತೊಂದು ವೋಲ್ವೊ ಬಸ್ ದುರಂತಕ್ಕೀಡಾಗಿದೆ. ಘಟನೆಯಲ್ಲಿ 8 ಮಂದಿ ಸಜೀವ ದಹನವಾಗಿದ್ದು, 14ಕ್ಕೂ ಹೆಚ್ಚು ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದಾರೆ.
ಪುಣೆಯಿಂದ ಅಹಮದಾಬಾದ್ಗೆ ತೆರಳುತ್ತಿದ್ದ ಖಾಸಗಿ ಬಸ್ ಮಹಾರಾಷ್ಟ್ರದ ಮನೋರ್ ಸಮೀಪದ ಕುಡೆ ಬಳಿ ಡೀಸೆಲ್ ಟ್ಯಾಂಕರ್ವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಲಕ್ಷುರಿ ಎಸಿ ಬಸ್ ಧಗಧಗನೆ ಹೊತ್ತಿ ಉರಿದಿದೆ. ಅಪಘಾತಕ್ಕೀಡಾದ ಬಸ್ ಪುಣೆಯ ಪರ್ಪಲ್ ಟ್ರಾವೆಲ್ಸ್ಗೆ ಸೇರಿದ್ದು, ಡೀಸೆಲ್ ಟ್ಯಾಂಕರ್ ಸರಕಾರಿ ಸ್ವಾಮ್ಯದ ಬಿಪಿಸಿಎಲ್ ಕಂಪನಿಗೆ ಸೇರಿದ್ದಾಗಿದೆ.
ಗಾಯಗೊಂಡವರನ್ನು ಮನೋಹರ್ ಗ್ರಾಮೀಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಥಾಣೆ ಜಿಲ್ಲಾಧಿಕಾರಿ ಪಿ.ವೆಲ್ರಸು ಅವರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.