ಕಟ್ಟಡದಿಂದ ಜಿಗಿದು ವಿದೇಶಿ ವಿದ್ಯಾರ್ಥಿ ಸಾವು
ಬೆಂಗಳೂರು: ನಗರದ ಕೋಶಿಸ್ ನರ್ಸಿಂಗ್ ಅಂಡ್ ಮ್ಯಾನೇಜ್ಮೆಂಟ್ನ ಹಾಸ್ಟೆಲ್ ಕಟ್ಟಡದಿಂದ ಶನಿವಾರ ವಿದೇಶಿ ವಿದ್ಯಾರ್ಥಿಯೊಬ್ಬ ಜಿಗಿದು ಸಾವಿಗೆ ಶರಣಾಗಿದ್ದಾನೆ.
ದಕ್ಷಿಣ ಆಫ್ರಿಕಾ ಮೂಲದ 22ರ ಹರೆಯದ ಕಸೀಜಿ ಕೆಡ್ರಕ್ ಸಾವಿಗೆ ಶರಣಾಗಿರುವ ವಿದ್ಯಾರ್ಥಿ. ನಗರದ ಕಾಡಸೊಣ್ಣಪ್ಪನಹಳ್ಳಿಯಲ್ಲಿರುವ ಕೋಶಿಸ್ ನರ್ಸಿಂಗ್ ಅಂಡ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಸಿಎ ವ್ಯಾಸಾಂಗ ಮಾಡತ್ತಿದ್ದರು.
ಕೋಶಿಸ್ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದ ಕೆಡ್ರಕ್ ಕಾಲೇಜಿಗೆ ಸೇರಿದ ಹಾಸ್ಟೆಲ್ನಲ್ಲೇ ತಂಗಿದ್ದರು. ಕೆಡ್ರಕ್ ಬೆಳಗ್ಗೆ 3.45ರ ಸುಮಾರಿನಲ್ಲಿ ಹಾಸ್ಟೆಲ್ನ 4ನೇ ಅಂತಸ್ತಿನಿಂದ ಜಿಗಿದು ಸಾವಿಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.
ಕೆಡ್ರಕೆ ಸಾವು ಆತ್ಮಹತ್ಯೆಯೋ ಅಥವಾ ಇನ್ನೇನ್ನೊ ಎಂಬುದು ಸದ್ಯ ತಿಳಿದುಬಂದಿಲ್ಲ. ಸ್ಧಳಕ್ಕೆ ಬಾಗಲೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಬಾಗಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.