ಜೈನ ಬಸದಿಯ ಮೂರು ವಿಗ್ರಹ ಕಳವು
ಮೂಡುಬಿದರೆಯ ಜೈನ ಬಸದಿಯ ವಿಗ್ರಹ ಕಳವು ಪ್ರಕರಣ ಮಾಸುವ ಮುನ್ನವೇ ಮತ್ತೆ ಚಿಕ್ಕಮಗಳೂರಿನಲ್ಲಿ ದುಷ್ಕರ್ಮಿಗಳು..
ಚಿಕ್ಕಮಗಳೂರು: ಮೂಡುಬಿದರೆಯ ಜೈನ ಬಸದಿಯ ವಿಗ್ರಹ ಕಳವು ಪ್ರಕರಣ ಮಾಸುವ ಮುನ್ನವೇ ಮತ್ತೆ ಚಿಕ್ಕಮಗಳೂರಿನಲ್ಲಿ ದುಷ್ಕರ್ಮಿಗಳು ಐತಿಹಾಸಿಕ ಜೈನ ವಿಗ್ರಹಗಳನ್ನು ಕಳವು ಮಾಡಿದೆ ಘಟನೆ ನಡೆದಿದೆ.
ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮದಲ್ಲಿರುವ ತ್ರಿಕೂಟ ಜೈನ ಬಸದಿಯಲ್ಲಿದ್ದ ಸುಮಾರು 900 ವರ್ಷಗಳ ಇತಿಹಾಸವಿರುವ ಜೈನ ವಿಗ್ರಹಗಳನ್ನು ದುಷ್ಕರ್ಮಿಗಳು ನಿನ್ನೆ ರಾತ್ರಿ ದೇವಸ್ಥಾನದ ಬಾಗಿಲು ಮುರಿದು ಕಳ್ಳತನ ಮಾಡಿದ್ದಾರೆ.
ಬಸದಿಯಲ್ಲಿದ್ದ ಮಹಾವೀರ ತೀರ್ಥಂಕರರ ವಿಗ್ರಹ, ನೇಮಿನಾಥ ಹಾಗೂ ಪಾಶ್ವನಾಥ ವರ್ಧಮಾನರ ಮೂರ್ತಿಗಳನ್ನು ಕಳ್ಳತನ ಮಾಡಲಾಗಿದೆ. ಸ್ಥಳಕ್ಕೆ ಶ್ವಾನ ದಳ ಮತ್ತು ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.