ದೇಶದ ಪ್ರಥಮ ಮೋನೋ ರೈಲಿಗೆ ವಿದ್ಯುಕ್ತ ಚಾಲನೆ
ವಾಣಿಜ್ಯನಗರಿ ಮುಂಬೈನಲ್ಲಿ ದೇಶದ ಪ್ರಥಮ ಮೋನೋ ರೈಲಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಅವರು ಶನಿವಾರ ಚಾಲನೆ ನೀಡಿದರು...
ಮುಂಬೈ: ವಾಣಿಜ್ಯನಗರಿ ಮುಂಬೈನಲ್ಲಿ ದೇಶದ ಪ್ರಥಮ ಮೋನೋ ರೈಲಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಅವರು ಶನಿವಾರ ಚಾಲನೆ ನೀಡಿದರು.
ಪ್ರಪಂಚದ ಎರಡನೇ ಅತೀ ದೊಡ್ಡ ಕಾರಿಡಾರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮೋನೋ ರೈಲು ಇದಾಗಿದ್ದು, ಸುಮಾರು 3000 ಸಾವಿರ ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಮುಂಬೈನ ವಡಾಲಾ ಮತ್ತು ಚಂಬೂರ್ ನಡುವೆ ಸುಮಾರು 8.95 ಕಿ.ಮೀ ಸಂಚರಿಸಲಿದ್ದು, ನಾಳೆಯಿಂದ ಸಾರ್ವಜನಿಕ ಸೇವೆಗೆ ಸಮರ್ಪಣೆಯಾಗಲಿದೆ.
ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಮೋನೋ ರೈಲು ಸಂಚಾರ ನಡೆಸಲಿದ್ದು, ಪ್ರತಿ ಹದಿನೈದು ನಿಮಿಷಕ್ಕೊಮ್ಮೆ ವಡಾಲಾದಿಂದ ಚಂಬೂರ್ಗೆ ಸಂಚರಿಸಲಿದೆ. ಈ ಸಂಚಾರದಲ್ಲಿ ಒಟ್ಟು 6 ನಿಲ್ದಾಣಿಗಳು ಬರಲಿವೆ.
ಸಂಪೂರ್ಣ ಹವಾನಿಯಂತ್ರಿತವಾಗಿರುವ ಈ ರೈಲು ಸುಮಾರು 2.300 ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ. ನಿಗದಿತ 8.93 ಕಿ.ಮೀ ದೂರವನ್ನು ಕೇವಲ 15 ನಿಮಿಷಗಳಲ್ಲಿ ಮೋನೋ ರೈಲು ತಲುಪಲಿದೆ. ಮೊದಲ ಪೇಸ್ನ ಪ್ರಯಾಣಕ್ಕೆ ಪ್ರತಿ ಟಿಕೆಟ್ಗೆ 5 ರಿಂದ 11 ರು. ದರ ನಿಗದಿಪಡಿಸಲಾಗಿದೆ. ಎರಡನೇ ಪೇಸ್ ಕಾಮಗಾರಿಯಲ್ಲಿ ಸಂತ್ಗಾಡ್ಗೆ ಮಹಾರಾಜ್ ಚೌಕ್ನಿಂದ ಜಾಕೋಬ್ ವೃತ್ತದವರೆಗೆ ವಿಸ್ತರಿಸಲು ಮುಂಬೈ ಮಹಾನಗರ ಅಭಿವೃದ್ಧಿ ಪ್ರಾಧಿಕಾರ ತೀರ್ಮಾನಿಸಿದೆ.
ಮೋನೋ ರೈಲಿನಿಂದ ಪ್ರಮುಖ ರೈಲ್ವೇ ನಿಲ್ದಾಣಗಳಿಗೆ ಸಂಪರ್ಕ ಲಭ್ಯವಾಗಲಿದೆ. ಮೊದಲ ಹಂತದಲ್ಲಿ 6 ರೈಲುಗಳು ಸಂಚಾರ ಆರಂಭಿಸಲಿದೆ. ಪ್ರತಿಯೊಂದು ಮೋನೋ ರೈಲಿನಲ್ಲಿ 4 ಬೋಗಿಗಳನ್ನು ಒಳಗೊಂಡಿದ್ದು, ಸುಮಾರು 560 ಮಂದಿ ಪ್ರಯಾಣಿಕರನ್ನು ಹೊತ್ಯೊಯಲಿವೆ.