ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಜು. 4ರಂದು 'ರಬ್ಡಿ' 25ನೇ ಪ್ರಯೋಗ

ಲವಾರು ಯಶಸ್ವೀ ಪ್ರಯೋಗಗಳ ಬೆನ್ನಲ್ಲೇ ರಂಗ ವರ್ತುಲ ರಂಗತಂಡ...

Lingaraj Badiger
Updated On : 2 Jul 2014, 2:15 am

ಹಲವಾರು ಯಶಸ್ವೀ ಪ್ರಯೋಗಗಳ ಬೆನ್ನಲ್ಲೇ ರಂಗ ವರ್ತುಲ ರಂಗತಂಡ, ನೌಶೀಲ್ ಮೆಹ್ತಾರ ಸಣ್ಣ ಕಥೆ ಆಧರಿಸಿದ “ರಬ್ಡಿ” ಹಾಸ್ಯ ನಾಟಕದ 25ನೇ ಹೆಮ್ಮೆಯ ಪ್ರಯೋಗದೊಂದಿಗೆ ತಮ್ಮ ಮುಂದಿದೆ. ನಿತೀಶ್ ಎಸ್ ಹಾಗು ಹೇಮಲತ ಲೋಕೇಶ್ ರಚಿಸಿ, ನಿತೀಶ್ ಎಸ್ ನಿರ್ದೇಶಿಸಿರುವ ರಬ್ಡಿ ನಾಟಕದ ಈ ವಿಶೇಷ ಪ್ರದರ್ಶನವನ್ನು ಜುಲೈ 4 ರಂದು ಕೆ.ಹೆಚ್.ಕಲಾಸೌಧ, ರಾಮಾಂಜನೇಯು ಗುಡ್ಡ ಆವರಣ, ಹನುಮಂತನಗರದಲ್ಲಿ ಸಂಜೆ 7.15ಕ್ಕೆ ಆಯೋಜಿಸಲಾಗಿದೆ.

ಮಣ್ಣು ಜಲ್ಲಿ ಹೊತ್ತು ಜೀವನ ಸಾಗಿಸುವ ಸಾವಂತ್ರಿ ಮತ್ತವಳ ಬುದ್ಧಿಮಾಂದ್ಯ ಅಂಗವಿಕಲ ಮಗಳು ಪುಟ್ಟಕ್ಕನ ಸುತ್ತ ರಬ್ಡಿ ಬೆಳೆಯುತ್ತಾ ಸಾಗುತ್ತದೆ. ಪುಟ್ಟಕ್ಕನ ಭವಿಷ್ಯದಲ್ಲಿ ತಾನು ಕಾಣುವ ಕನಸುಗಳು ನನಸಾಗಲು ಸಾಧ್ಯವಿಲ್ಲವೆಂಬ ಅರಿವಿದ್ದರೂ, ಛಲಬಿಡದೆ ಆ ಕನಸುಗಳ ಬೆನ್ನೇರಿ ಮುನ್ನುಗ್ಗುವ ಸಾವಂತ್ರಿಯ ಬದುಕ ಪ್ರೀತಿಸುವ ಬಗೆ ನಮ್ಮೆಲ್ಲರಿಗೂ ಮಾದರಿಯಾಗಿ ನಿಲ್ಲುತ್ತದೆ. ಪುಟ್ಟಕ್ಕನನ್ನು ವಿಶೇಷ ಶಾಲೆಗೆ ಸೇರಿಸುವ ಸಲುವಾಗಿ, ಅದಕ್ಕೆ ತಗುಲುವ ವೆಚ್ಚ ಭರಿಸಲು ಓರ್ವ ಐಟಿ ಉದ್ಯೋಗಿ ದಂಪತಿಗಳಿಗೆ ಬಾಡಿಗೆ ತಾಯಿಯಾಗಲು ಸಾವಂತ್ರಿ ಮುಂದಾಗುತ್ತಾಳೆ. ನೈಸರ್ಗಿಕ ಹಾಗು ಪ್ರಾಕೃತಿಕ ಕ್ರಿಯೆಗಳ ವಿರುದ್ಧದ ಮನುಷ್ಯನ ಸೆಣೆಸಾಟ, ತಾಯಿ-ಮಗು ನಡುವಣ ಅವಿನಾಭಾವ ಸಂಬಂಧ ಹಾಗು ತಾಯ್ತನದ ಸೂಕ್ಷ್ಮ ಸಂವೇದನೆಗಳ ಸುತ್ತಾ  ರಬ್ಡಿ ತನ್ನನ್ನ ತಾನು ವಿಸ್ತಸಿರಿಕೊಳ್ಳುತ್ತಾ ಸಾಗುತ್ತದೆ. ಬಾಡಿಗೆ ತಾಯಿಯ ಮೂಲಕ ಮುಗುವನ್ನು ಪಡೆಯುವ ಆ ಐಟಿ ಉದ್ಯೋಗಿ ದಂಪತಿಗಳ ಪ್ರಯತ್ನ ಸಫಲವಾಗುವುದೆ ? ಸಾವಂತ್ರಿಯು ಆ ದಂಪತಿಗಳಿಗೆ ಮಗು ಹೆತ್ತು ಕೊಡುವಳೇ ?? ಸಾವಂತ್ರಿಯ ಕನಸುಗಳು ನನಸಾಗುವುದೆ ???

ಪಾತ್ರವರ್ಗ : ದೀಪಿಕ, ಸುಶ್ಮಿತಾ, ನಿತೀಶ್ ಎಸ್, ಮಾನಸ ಜೋಷಿ, ಹರೀಷ್ ಬಾಬು, ಸಿರಿ ಹಾಗು ನಿಖಿಲ್

ನಿರ್ದೇಶನ : ನಿತೀಶ್ ಎಸ್
ರಚನೆ : ಹೇಮಲತ ಲೋಕೇಶ್ ಹಾಗು ನಿತೀಶ್ ಎಸ್
ಸಂಗೀತ: ರಘುನಂದನ್
ದಿನಾಂಕ : ಜುಲೈ 4, 2014 | 7.15ಕ್ಕೆ
ಸ್ಥಳ : ಕೆ.ಹೆಚ್.ಕಲಾಸೌಧ, ರಾಮಾಂಜನೇಯು ಗುಡ್ಡ ಆವರಣ, ಹನುಮಂತನಗರ, ಬೆಂಗಳೂರು
ಟಿಕೆಟ್ ಮುಂಗಡ ಕಾಯ್ದಿರಿಸುವಿಕೆಗೆ : 9986828680

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement