ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಪೊಲೀಸರ ಮೇಲೆ ಹುನಗುಂದ ಶಾಸಕ ಹಲ್ಲೆ

Vishwanath S
Updated On : 2 Jul 2014, 3:43 am

ಬೆಂಗಳೂರು: ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಹುನಗುಂದ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ವಿರುದ್ಧ ದೂರು ದಾಖಲಾಗಿದೆ.

ಮಂಗಳವಾರ ತಡ ರಾತ್ರಿ ಬೆಂಗಳೂರಿನ ಬಾರೊಂದರಲ್ಲಿ ಕಾಶಪ್ಪನವರ್ ಅವರ ಹುಟ್ಟು ಹಬ್ಬದ ಪಾರ್ಟಿ ನಡೆಸುತ್ತಿದ್ದ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸ್ ಪೇದೆಗಳಾದ ಕಿರಣ್, ಪ್ರಶಾಂತ್ ನಾಯಕ್‌ ಕಬ್ಬನ್‌ಪಾರ್ಕ್ ಠಾಣೆಗೆ ದೂರು ನೀಡಿದ್ದಾರೆ.

ಹುಟ್ಟು ಹಬ್ಬದ ಸಂಭ್ರಮಾಚರಣೆ ವೇಳೆ ತಡ ರಾತ್ರಿ 2 ಗಂಟೆಯವರೆಗೂ ಧ್ವನಿವರ್ಧಕ ಬಳಸಿ ಪಾರ್ಟಿ ನಡೆಸುತ್ತಿದ್ದುದನ್ನು ಚಿತ್ರೀಕರಿಸಲು ತೆರಳಿದ್ದ ಪೇದೆಗಳಿಬ್ಬರಿಗೆ ಕಾಶಪ್ಪನವರ್ ಹಾಗೂ ಬೆಂಬಲಿಗರು ಹಲ್ಲೆ ನಡೆಸಿದ್ದರು ಎನ್ನಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಕೆ.ಜೆ. ಜಾರ್ಜ್, ಎಲ್ಲದಕ್ಕೂ ನನ್ನನ್ನೇ ಕೇಳಬೇಡಿ, ಪೊಲೀಸರನ್ನು ಕೇಳಿ ಎಂಬ ಹಾರಿಕೆಯ ಉತ್ತರ ನೀಡಿದ್ದಾರೆ.

ನಾನು ಯಾರ ಮೇಲೆ ಹಲ್ಲೆ ನಡೆಸಿಲ್ಲ: ಶಾಸಕ ವಿಜಯಾನಂದ
ನಾನು ಯಾವ ಪೊಲೀಸ್ ಮೇಲೂ ಹಲ್ಲೆ ನಡೆಸಿಲ್ಲ ಎಂದು ಹುನಗುಂದ ಶಾಸಕ ವಿಜಯಾನಂದ ಕಾಶೆಪ್ಪನವರ್ ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾಶೆಪ್ಪನವರ್, ಖಾಸಗಿ ಹೊಟೇಲೊಂದರಲ್ಲಿ ನಾವು ಕುಟುಂಬ ಸಮೇತರಾಗಿ ಭೋಜನಕೂಟಕ್ಕೆ ಸೇರಿದ್ದೇವು. ಆ ವೇಳೆ ಪೊಲೀಸರು ಅಲ್ಲಿಗೆ ಬಂದಿದ್ದು ನಿಜ. ಅಲ್ಲಿಗೆ ಬಂದ ಪೊಲೀಸರು ಫೋಟೋ ತೆಗೆಯುತ್ತಿದ್ದರು ಇದಕ್ಕೆ ನಾನು ಫೋಟೋ ತೆಗೆಯಬೇಡಿ ಎಂದು ಹೇಳಿದ್ದೇ ಅಷ್ಟೇ ಎಂದು ತಿಳಿಸಿದ್ದಾರೆ.

ಫೋಟೋ ತೆಗೆಯುತ್ತಿರುವುದು ಏಕೆ ಎಂದಿದ್ದಕ್ಕೆ ಪೊಲೀಸರು ಹಲ್ಲೆ ಎಂದು ಹೇಳುತ್ತಿದ್ದಾರೆ ಎಂದರು.




Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement