ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸೇನೆ ಅಕ್ರಮ ಬಯಲಿಗೆಳೆದ್ದಿದ್ದ ಯೋಧ ಮಂಜುನಾಥ್ ಸೇವೆಯಿಂದ ವಜಾ

ಭಾರತದ ಗಡಿಯಲ್ಲಿ ನಡೆಯುತ್ತಿದ್ದ ಅಕ್ರಮಗಳನ್ನು...

Vishwanath S
Updated On : 3 Jul 2014, 6:48 am

ನವದೆಹಲಿ: ಭಾರತದ ಗಡಿಯಲ್ಲಿ ನಡೆಯುತ್ತಿದ್ದ ಅಕ್ರಮಗಳನ್ನು ಬಹಿರಂಗಗೊಳಿಸಿದ್ದ ಬಿಎಸ್‌ಎಫ್ ಯೋಧ ಮಂಜುನಾಥ್‌ರನ್ನು ಸೇವೆಯಿಂದ ವಜಾಗೊಳಿಸಿ ಎಸ್‌ಎಸ್‌ಎಫ್ ಕೋರ್ಟ್ ಆದೇಶ ಹೊರಡಿಸಿದೆ.

ಗಡಿಯಲ್ಲಿ ನಡೆಯುತ್ತಿದ್ದ ಅಕ್ರಮಗಳಿಗೆ ಸೇನಾ ಅಧಿಕಾರಿಗಳು ಕುಮ್ಮಕ್ಕು ನೀಡುತ್ತಿದ್ದಾರೆ ಹಾಗೂ ಯೋಧರಿಗೆ ಹಿರಿಯ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನು ಮಂಜುನಾಥ್ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಸಮರಿ ಸೆಕ್ಯುರಿಟಿ ಫೋರ್ಸ್‌ನ ನ್ಯಾಯಾಧಿಕಾರಿ ಕಮಾಂಡೆಂಟ್ ವಿ. ಬಡೋಲಾ ಅವರು ಮಂಜುನಾಥ್‌ರನ್ನು ಸೇವೆಯಿಂದ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ.

ಸೇವೆಯಿಂದ ವಜಾಗೊಳಿಸಿದ ನಂತರ ಪ್ರತಿಕ್ರಿಯಿಸಿರುವ ಮಂಜುನಾಥ್, ತಾವು ನೀಡಿದ ದೇಶದ್ರೋಹದ ಆರೋಪಗಳ ಬಗ್ಗೆ ಸರಿಯಾಗಿ ತನಿಖೆ ಮಾಡದೇ ನಾನು ಮೇಲಾಧಿಕಾರಿಗಳ ಮೇಲೆ ಕೈಮಾಡಿದ್ದೇನೆ ಮತ್ತು ಕೆಟ್ಟ ಮಾತುಗಳಿಂದ ಬೈದಿದ್ದೇನೆ ಎಂಬ ಆರೋಪದ ಮೇಲೆ ವಿಚಾರಣೆ ನಡೆಸಿ ನನ್ನನ್ನು ವಜಾ ಮಾಡಿದ್ದಾರೆ ಎಂದು ಮಂಜುನಾಥ್ ಆರೋಪಿಸಿದ್ದಾರೆ.

ಯೋಧ ಮಂಜುನಾಥ್ ಶಿವಮೊಗ್ಗ ಮೂಲದವರಾಗಿದ್ದು, ಭಾರತದ ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಈ ವೇಳೆ ಅಲ್ಲಿ ನಡೆಯುತ್ತಿದ್ದ ಅವ್ಯವಹಾರಗಳ ಕುರಿತಾಗಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಯಾವುದೇ ಕ್ರಮಗಳನ್ನು ಕೈಗೊಳ್ಳದ ಹಿರಿಯ ಅಧಿಕಾರಿಗಳು ಗಡಿಯಲ್ಲಿ ನಡೆಯುವ ಅಕ್ರಮಗಳಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಮೊಬೈಲ್ ಮೂಲಕ ತಮ್ಮ ಮಾತುಗಳನ್ನು ಚಿತ್ರೀಕರಿಸಿ ಮಾಧ್ಯಮಗಳಿಗೆ ಕಳುಹಿಸಿದ್ದರು.

ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತದೊಳಗೆ ದನ ಹಾಗೂ ಒಂಟೆಗಳನ್ನು ಸಾಗಿಸುತ್ತಿರುವ ದೃಶ್ಯಾವಳಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement