ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

46 ಭಾರತೀಯ ನರ್ಸ್ಗಳ ಬಿಡುಗಡೆ, ನಾಳೆ ಸ್ವದೇಶಕ್ಕೆ ಆಗಮನ

ಐಎಸ್ಐಎಸ್ ಉಗ್ರರ ಕೈವಶದಲ್ಲಿದ್ದ 46 ಭಾರತೀಯ ನರ್ಸ್ಗಳನ್ನು ಬಿಡುಗಡೆ ಮಾಡಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ದೊಡ್ಡ ರಿಲೀಫ್ ಸಿಕ್ಕಿದೆ.

Vishwanath S
Updated On : 4 Jul 2014, 3:44 am

ನವದೆಹಲಿ: ಐಎಸ್ಐಎಸ್ ಉಗ್ರರ ಕೈವಶದಲ್ಲಿದ್ದ 46 ಭಾರತೀಯ ನರ್ಸ್ಗಳನ್ನು ಬಿಡುಗಡೆ ಮಾಡಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ದೊಡ್ಡ ರಿಲೀಫ್ ಸಿಕ್ಕಿದೆ.

ಈ ಬಗ್ಗೆ ದೆಹಲಿಯಲ್ಲಿಂದು ಸುದ್ದಿಗಾರರಿಗೆ ಮಾಹಿತಿ ನೀಡಿದ ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ, ಇಂದು ವಿದೇಶಾಂಗ ಸಚಿವರಾದ ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡಿದಾಗ 46 ಭಾರತೀಯ ದಾದಿಯರನ್ನು ವಶಪಡಿಸಿಕೊಂಡಿದ್ದ ಉಗ್ರರು ಬಿಡುಗಡೆ ಮಾಡಿರುವ ವಿಚಾರವನ್ನು ಸ್ಪಷ್ಟಪಡಿಸಿದ್ದು, ನಾಳೆ ಕೇರಳದ ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ ಎಂದರು.

ಉಗ್ರರಿಂದ ಬಿಡುಗಡೆಯಾಗಿರುವ ದಾದಿಯರು ಭಾರತೀಯ ರಾಯಭಾರಿ ಕಚೇರಿಯಲ್ಲಿ ಸುರಕ್ಷಿತವಾಗಿದ್ದು, ದಾದಿಯರನ್ನು ಸ್ವದೇಶಕ್ಕೆ ಕರೆತರಲು ವಿಶೇಷ ವಿಮಾನ ಇಂದು ಸಂಜೆ 5 ಗಂಟೆಗೆ ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇರಾಕ್ನ ಹಿರ್ಬಿಲ್ ವಿಮಾನ ನಿಲ್ದಾಣಕ್ಕೆ ತೆರಳಲಿದೆ ಎಂದರು.

ನಿನ್ನೆ 46 ಭಾರತೀಯ ನರ್ಸ್ಗಳನ್ನು ಇರಾಕ್ನ ಟಿಕ್ರಿತ್ ನಗರದ ಆಸ್ಪತ್ರೆಯೊಂದರಿಂದ ಬಲವಂತವಾಗಿ ಮತ್ತೊಂದು ಪ್ರದೇಶಕ್ಕೆ ಸ್ಥಳಾಂತರಿಸಿದ್ದ ಐಎಸ್ಐಸ್ ಉಗ್ರರು ಇಂದು ಬಿಡುಗಡೆ ಮಾಡಿದ್ದು, ನಾಳೆ ಬೆಳಗ್ಗೆ 7 ಗಂಟೆಗೆ ಸ್ವದೇಶಕ್ಕೆ ಮರಳಲಿದ್ದಾರೆ ಎನ್ನಲಾಗಿದೆ.

ಇರಾಕ್‌ನಲ್ಲಿ ಸುನ್ನಿ ಬಂಡುಕೋರರಿಂದ ಆವಳಿಯಿಂದಾಗಿ ಅಲ್ಲಿದ್ದ ಭಾರತ ಮೂಲದ ನಿವಾಸಿಗಳ ಸುರಕ್ಷೆ ಬಗ್ಗೆ ತಲೆಕೆಡಿಸಿಕೊಂಡಿದ್ದ ಬಿಜೆಪಿ ಸರ್ಕಾರಕ್ಕೆ ದಾದಿಯರ ಬಿಡುಗಡೆ ಕೊಂಚ ರಿಲೀಫ್ ನೀಡಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement