ಎಲ್ಪಿಜಿ ಬೆಲೆ 250 ರುಪಾಯಿ ಏರಿಕೆಗೆ ಶಿಫಾರಸು
ಕಳೆದ ಬುಧವಾರವಷ್ಟೇ ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆ ಮಾಡಿದ್ದ ಕೇಂದ್ರ ಸರ್ಕಾರ...
ನವದೆಹಲಿ: ಕಳೆದ ಬುಧವಾರವಷ್ಟೇ ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆ ಮಾಡಿದ್ದ ಕೇಂದ್ರ ಸರ್ಕಾರ, ಇದೀಗ ಸಿಲಿಂಡರ್ ಹಾಗೂ ಸೀಮೆಎಣ್ಣೆ ಬೆಲೆಯನ್ನು ಏರಿಕೆ ಮಾಡುವ ಸಾಧ್ಯತೆ ಇದೆ.
ಪ್ರತಿ ಎಲ್ಪಿಜಿ ಸಿಲಿಂಡರ್ನ ಬೆಲೆಯನ್ನು ಹೆಚ್ಚಿಗೆ 250 ರುಪಾಯಿ ಹಾಗೂ ಪ್ರತಿ ಲೀಟರ್ ಸೀಮೆಎಣ್ಣೆ ಬೆಲೆಯನ್ನು 4 ರಿಂದ 5 ರುಪಾಯಿಗೆ ಏರಿಕೆ ಮಾಡಬೇಕು ಎಂದು ಕಿರೀಟ್ ಪಾರೇಖ್ ಸಮಿತಿ ಶಿಫಾರಸು ಮಾಡಿದೆ.
ಎಂದಿನಂತೆ ಪ್ರತಿ ತಿಂಗಳು ಡೀಸೆಲ್ ಬೆಲೆ ಲೀಟರಿಗೆ 40 ರಿಂದ 50 ಪೈಸೆ ಏರಿಸುವುದನ್ನೇ ಮುಂದುವರಿಸಿಕೊಂಡು ಹೋಗುವುದನ್ನು ತೈಲ ಸಚಿವಾಲಯವು ಪ್ರಸ್ತಾಪಿಸಲಿದೆ.
ಎಲ್ಪಿಜಿ ಹಾಗೂ ಸೀಮೆಎಣ್ಣೆ ದರ ಏರಿಕೆ ಕುರಿತ ತಜ್ಞನ ಸಮಿತಿಯ ಈ ಶಿಫಾರಸನ್ನು ಇಂಧನ ಸಚಿವಾಲಯ ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿಗೆ ಕಳಿಸುವ ಸಾಧ್ಯತೆ ಇದೆ.