ನಾವೆಲ್ಲಾ ಸುರಕ್ಷಿತವಾಗಿದ್ದೇವೆ: ಒತ್ತೆಯಾಳಾಗಿರುವ ನರ್ಸ್
ಇರಾಕ್ನಲ್ಲಿ ಸುನ್ನಿ ಬಂಡುಕೋರರ ವಶದಲ್ಲಿರುವ ಕೇರಳದ 46 ನರ್ಸ್ಗಳಲ್ಲಿ ಒಬ್ಬರು ತಮ್ಮ...
ತಿರುವಂತನಪುರಂ: ಇರಾಕ್ನಲ್ಲಿ ಸುನ್ನಿ ಬಂಡುಕೋರರ ವಶದಲ್ಲಿರುವ ಕೇರಳದ 46 ನರ್ಸ್ಗಳಲ್ಲಿ ಒಬ್ಬರು ತಮ್ಮ ತಾಯಿಗೆ ಕರೆ ಮಾಡಿ ತಾವು ಸುರಕ್ಷಿತವಾಗಿರುವುದರ ಬಗ್ಗೆ ಮಾಹಿತಿ ನೀಡಿದ್ದಾರೆ.
ಕೇರಳದಲ್ಲಿರುವ ತಮ್ಮ ತಾಯಿಗೆ ಕರೆ ಮಾಡಿದ ನರ್ಸ್, ನಾವೇಲ್ಲರು ಸುರಕ್ಷಿತರಾಗಿದ್ದೇವೆ ಎಂದು ತಿಳಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ನಿನ್ನೆ ರಾತ್ರಿ ಮೊಸುಲ್ ಎಂಬ ಪ್ರದೇಶಕ್ಕೆ ನಮ್ಮನ್ನು ಕರೆತಂದದ್ದು, ಯಾವುದೋ ಕಟ್ಟಡದೊಳಗೆ ನಮ್ಮನ್ನು ಕೂಡಿ ಹಾಕಿದ್ದು, ಶಸ್ತ್ರಸಜಿತ ಉಗ್ರರು ಕಾವಲಿಗಿದ್ದಾರೆ ಎಂದು ನನ್ನ ಮಗಳು ತಿಳಿಸಿದ್ದಾಳೆ ಎಂದು ಅಪಹೃತ ನರ್ಸ್ ತಾಯಿ ಹೇಳಿದ್ದಾರೆ.
ಎಲ್ಲಾ ನರ್ಸ್ಗಳಿಗೆ ಆಹಾರ ಮತ್ತು ನೀರು ಪೂರೈಸುತ್ತಿದ್ದು, ಸಭ್ಯವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಮಗಳು ಹೇಳಿದಳು. ಇದನ್ನು ಹೊರತು ಪಡಿಸಿ ಇನ್ನೇನು ಮಾತನಾಡಿಲ್ಲ ಎಂದು ತಾಯಿ ತಿಳಿಸಿದ್ದಾರೆ.
ತಿಕ್ರಿತ್ ಆಸ್ಪತ್ರೆಯಲ್ಲಿದ್ದ ಕೇರಳದ 46 ನರ್ಸ್ಗಳನ್ನು ಸುನ್ನಿ ಬಂಡುಕೋರರು ಅಪಹರಿಸಿ ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದಾರೆ. ಬಾಗ್ದಾದ್ ನಗರದಲ್ಲಿ ಸೇನಾ ದಾಳಿ ತೀವ್ರವಾಗಿರುವ ಹಿನ್ನಲೆಯಲ್ಲಿ ಅವರನ್ನು ಉಗ್ರರು ರಹಸ್ಯ ತಾಣಕ್ಕೆ ಕರೆದೊಯ್ದಿದ್ದಾರೆ.