ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕೂಡಗಿ ಉಷ್ಣವಿದ್ಯುತ್ ಸ್ಥಾವರ ನಿರ್ಮಾಣ ವಿರೋಧಿಸಿ ರೈತರ ಪ್ರತಿಭಟನೆ

Vishwanath S
Updated On : 5 Jul 2014, 3:10 am

ಕೂಡಗಿ(ಬಿಜಾಪುರ): ಕೂಡಗಿ ಉಷ್ಣ ವಿದ್ಯುತ್ ಸ್ಥಾವರ ನಿರ್ಮಾಣವನ್ನು ವಿರೋಧಿಸಿ ರೈತರು ನಡೆಸುತ್ತಿದ್ದ ಪ್ರತಿಭಟನೆ ಉಗ್ರ ರೂಪ ತಾಳಿದೆ.

ಉಷ್ಣ ವಿದ್ಯುತ್ ಸ್ಥಾವರಕ್ಕಾಗಿ ಸುತ್ತಮುತ್ತಲಿನ ರೈತರು ಜಮೀನಿಗೆ ಸೂಕ್ತ ಬೆಲೆ ಹಾಗೂ ಸ್ಥಳೀಯರಿಗೆ ಕೆಲಸ ನೀಡುವ ಭರವಸೆ ನೀಡಿದ್ದ ಎನ್‌ಟಿಪಿಸಿಎಲ್ ಇದೀಗ ನಿರ್ಮಾಣ ಕಾಮಗಾರಿಗಾಗಿ ನೆರೆ ರಾಜ್ಯಗಳಿಂದ ಕಾರ್ಮಿಕರನ್ನು ಕರೆ ತಂದಿದ್ದು, ರೈತರ ಆಕ್ರೋಶಕ್ಕೆ ಕಾರಣವಾಗಿತ್ತು.

ಬಸವನಬಾಗೇವಾಡಿ ತಾಲೂಕಿನ ಕೂಡಗಿ, ತೆಲಗಿ ಗ್ರಾಮದ ನೂರಾರು ಮಂದಿ ರೈತರು ನಡೆಸುತ್ತಿದ್ದ ಪ್ರತಿಭಟನೆ ವಿಕೋಪಕ್ಕೆ ತಿರುಗಿದ್ದು, ನೂರಾರು ಪ್ರತಿಭಟನಾಕಾರರು ನಿರ್ಮಾಣಕಾಮಗಾರಿಗೆ ತಂದಿದ್ದ ನಾಲ್ಕು ಟಿಪ್ಪರ್ ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ. ಮತ್ತೊಂದೆಡೆ ಉದ್ರಿಕ್ತ ಗುಂಪು ಎರಡು ಪೊಲೀಸ್ ವಾಹಗಳನ್ನು ಜಖಂಗೊಳಿಸಿದೆ.

ಪ್ರತಿಭಟನೆ ಉಗ್ರ ರೂಪ ತಾಳುತ್ತಿದ್ದಂತೆ ಕೊಲ್ಹಾರ್ ಠಾಣಾ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಗಾಳಿಯಲ್ಲಿ ಗುಂಡು ಹಾರಿಸಿದರು. ಈ ವೇಳೆ ಪೊಲೀಸರು ಹಾರಿಸಿದ ಗುಂಡು ಇಬ್ಬರು ರೈತರಿಗೆ ತಗುಲಿ ಗಾಯಗೊಂಡಿದ್ದಾರೆ. ಮುತ್ತಗಿ ಗ್ರಾಮದ ನಿವಾಸಿ ಬಾಬು ಬಡಿಗೇರ ಹಾಗೂ ಮಸೂತಿ ಗ್ರಾಮದ ನಿವಾಸಿ ಸದಾಶಿವ ಗಣಾಚಾರಿ ಎಂಬುವರಿಗೆ ಗುಂಡು ತಗುಲಿ ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಧಳೀಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಉಷ್ಣ ವಿದ್ಯುತ್ ಸ್ಥಾವರ ನಿರ್ಮಾಣ ಕಾಮಗಾರಿಗೆ ಬೇರೆ ರಾಜ್ಯಗಳಿಂದ ನೂರಾರು ಕಾರ್ಮಿಕರು ಗಂಟುಮೂಟೆ ಸಮೇತ ಕೂಡಗಿಗೆ ಬಂದಿದ್ದು, ಇದನ್ನು  ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಎನ್‌ಟಿಪಿಸಿಎಲ್ ಕಾರ್ಮಿಕರು ಪ್ರತಿಭಟನಾ ರೈತರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಇದರಿಂದಾಗಿ ಇಬ್ಬರ ನಡುವೆ ಘರ್ಷಣೆ ಶೂರುವಾಗಿದೆ. ರೈತರ ಪ್ರತಿಭಟನೆಗೆ ಹೆದರಿದ ಕಾರ್ಮಿಕರು ಗಂಟುಮೂಟೆ ಸಮೇತ ಜಾಗ ಖಾಲಿ ಮಾಡಿದ್ದಾರೆ.

ರೈತರ ಪ್ರತಿಭಟನೆ ಉಗ್ರ ರೂಪ ತಾಳುತ್ತಿದ್ದಂತೆ ಸ್ಥಳದಲ್ಲಿ ಬಿಗುವಿನ ವಾತಾರವಣಾ ಸೃಷ್ಠಿಯಾಗಿದ್ದು, ಗುಂಪನ್ನು ಚದುರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದಾರೆ.

ಪ್ರತಿಭಟನೆಯಿಂದಾಗಿ ಸ್ಥಾವರದಿಂದ ಸುಮಾರು 3 ಕಿ.ಮೀವರೆಗೆ 2 ಕಾಲ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement