ತವರಿಗೆ ಮರಳಿದ ಭಾರತೀಯ ನರ್ಸ್‌ಗಳು
ಯುದ್ಧಪೀಡಿತ ಇರಾಕ್‌ನಲ್ಲಿ ಇಸಿಸ್ ಉಗ್ರರ ವಶದಿಂದ ಬಿಡುಗಡೆಗೊಂಡಿದ್ದ 46 ಮಂದಿ...
ನವದೆಹಲಿ: ಯುದ್ಧಪೀಡಿತ ಇರಾಕ್‌ನಲ್ಲಿ ಉಗ್ರರ ವಶದಿಂದ ಬಿಡುಗಡೆಗೊಂಡಿದ್ದ 46 ಮಂದಿ ನರ್ಸ್‌ಗಳು ಸೇರಿದಂತೆ 160 ಭಾರತೀಯರು ಭಾರತಕ್ಕೆ ಮರಳಿದ್ದಾರೆ.
ಇರಾಕ್‌ನಲ್ಲಿ ಉಗ್ರರಿಂದ ಬಿಡುಗಡೆಯಾಗಿ ಬಂದ 46 ಭಾರತೀಯ ನರ್ಸ್‌ಗಳನ್ನು ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರು ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ಏರ್ ಇಂಡಿಯಾ ವಿಮಾನ ಇಂದು ಬೆಳಗ್ಗೆ 11.50ಕ್ಕೆ ಕೊಚ್ಚಿ ತಲುಪಿತು.
ಇರಾಕ್‌ನ ಆಂತರಿಕ ಸಂಘರ್ಷದಲ್ಲಿ ನಲುಗಿದ್ದ ಭಾರತೀಯ 46 ನರ್ಸ್‌ಗಳನ್ನು ಉಗ್ರರು ಗುರುವಾರ ಬಿಡುಗಡೆ ಮಾಡಿದ್ದರು. ನರ್ಸ್‌ಗಳನ್ನು ಕರೆತರಲು ಕೇಂದ್ರ ಸರ್ಕಾರ ಏರ್ ಇಂಡಿಯಾ ವಿಮಾನವನ್ನು ಕಳುಹಿಸಿತ್ತು.