ಇರಾಕ್ ಬಿಕ್ಕಟ್ಟು: ಸ್ವದೇಶಕ್ಕೆ ಮರಳಿದ 200 ಭಾರತೀಯರು
ಉಗ್ರರ ಬಂಧನದಿಂದ ವಿಮುಕ್ತರಾಗಿ ಸ್ವದೇಶಕ್ಕೆ ಬಂದಿಳಿದ 46 ಭಾರತೀಯ ನರ್ಸ್‌ಗಳು ಸೇರಿದಂತೆ ಇತರ 137 ಮಂದಿ ಬಳಿಕ ಇದೀಗ 200 ಮಂದಿ ಭಾರತೀಯರ...
ನವದೆಹಲಿ: ಉಗ್ರರ ಬಂಧನದಿಂದ ವಿಮುಕ್ತರಾಗಿ ಸ್ವದೇಶಕ್ಕೆ ಬಂದಿಳಿದ 46 ಭಾರತೀಯ ನರ್ಸ್‌ಗಳು ಸೇರಿದಂತೆ ಇತರ 137 ಮಂದಿ ಬಳಿಕ ಇದೀಗ 200 ಮಂದಿ ಭಾರತೀಯರ ತಂಡವೊಂದು ಸ್ವದೇಶಕ್ಕೆ ಬಂದಿಳಿದಿದ್ದಾರೆ.
ಗಲಭೆಗ್ರಸ್ತ ನಜಾಫ್ ಪಟ್ಟಣದಿಂದ 200 ಮಂದಿ ಭಾರತೀಯರು ಇಂದು ಬೆಳಗ್ಗೆ 4.30ರ ವೇಳೆಗೆ ಇರಾಕ್ ಏರ್‌ವೇಸ್‌ನ ವಿಮಾನದಲ್ಲಿ ದೆಹಲಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಮುಂದಿನ ಎರಡು ದಿನಗಳಲ್ಲಿ ಇನ್ನೂ ಹಲವು ಭಾರತೀಯರು ಸ್ವದೇಶಕ್ಕೆ ಮರಳುವ ಸಾಧ್ಯತೆಯಿದೆ ಎಂದರು.
ಇರಾಕ್‌ನಲ್ಲಿ ಪರಿಸ್ಥಿತಿ ಹದಗೆಟ್ಟಿದ್ದು, ಅಲ್ಲಿ ನೆಲೆಸಲು ಸಾಧ್ಯವಾಗದಂತಾಗಿದೆ. ಪುನಃ ಭಾರತಕ್ಕೆ ಮರಳಿರುವುದು ಸಂತೋಷವಾಗಿದ್ದು, ನಾವು ಭಾರತಕ್ಕೆ ಮರಳಲು ಸಹಕರಿಸಿದ ಭಾರತೀಯ ರಾಯಭಾರಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಇರಾಕ್‌ನಿಂದ ಮರಳಿದ ವ್ಯಕ್ತಿಯೊರ್ವ ಸಂತಸ ವ್ಯಕ್ತಪಡಿಸಿದ್ದಾರೆ.
ಇರಾಕ್‌ನಲ್ಲಿ ಮತ್ತಷ್ಟು ಭಾರತೀಯರು ಸಿಕ್ಕಿ ಹಾಕಿಕೊಂಡಿದ್ದು, ಸದ್ಯದಲ್ಲೇ ಸುಮಾರು 600 ಮಂದಿ ಭಾರತೀಯರು ಭಾರತಕ್ಕೆ ಹಿಂದಿರುಗುವ ನಿರೀಕ್ಷೆಯಿದೆ ಎಂದು ವಿದೇಶಾಂಗ ಖಾತೆ ಮೂಲಗಳು ತಿಳಿಸಿವೆ. ಇರಾಕ್‌ನ ಒಳಗೂ ಮತ್ತು ಹೊರಗು ಸಾಕಷ್ಟು ಪ್ರಯತ್ನಗಳನ್ನು ನಡೆಸಿ ಭಾರತೀಯರನ್ನು ಹಿಂದಕ್ಕೆ ಕರೆತರಲಾಗಿದೆ ಎಂದು ವಿದೇಶ ವ್ಯವಹಾರಗಳ ಸಚಿವಾಲಯ ಹೇಳಿದೆ.