ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಗಂಗಾ ಶುದ್ಧೀಕರಣ ಯೋಜನೆಗೆ 'ಹಿಂದುತ್ವ' ಬಣ್ಣ ಬೇಡ: ಜೈರಾಮ್ ರಮೇಶ್

ಭಾರತದ ಪವಿತ್ರ ಗಂಗಾ ನದಿ ಶುದ್ಧೀಕರಣ ಯೋಜನೆಯನ್ನು ಹಿಂದುತ್ವ ಯೋಜನೆಯನ್ನಾಗಿ ಮಾಡಿ ಎನ್‌ಡಿಎ ಸರ್ಕಾರ ರಾಜಕೀಯ ಲಾಭ ಪಡೆಯಲು ಮುಂದಾಗಿದೆ...

Vishwanath S
Updated On : 6 Jul 2014, 4:41 am

ನವದೆಹಲಿ: ಭಾರತದ ಪವಿತ್ರ ಗಂಗಾ ನದಿ ಶುದ್ಧೀಕರಣ ಯೋಜನೆಯನ್ನು ಹಿಂದುತ್ವ ಯೋಜನೆಯನ್ನಾಗಿ ಮಾಡಿ ಎನ್‌ಡಿಎ ಸರ್ಕಾರ ರಾಜಕೀಯ ಲಾಭ ಪಡೆಯಲು ಮುಂದಾಗಿದೆ ಎಂದು ಮಾಜಿ ಕೇಂದ್ರ ಪರಿಸರ ಸಚಿವ ಜೈರಾಮ್ ರಮೇಶ್ ಭಾನುವಾರ ಆರೋಪಿಸಿದ್ದಾರೆ.

ಗಂಗಾ ನದಿ ಶುದ್ಧೀಕರಣ ಯೋಜನೆಯನ್ನು ಹಿಂದುತ್ವ ಯೋಜನೆಯಾಗಿ ನೋಡಬೇಡಿ. ಇದು ಹಿಂದುತ್ವದ ಯೋಜನೆಯಲ್ಲ. ಇದು ರಾಷ್ಟ್ರೀಯ ಯೋಜನೆ ಎಂದರು. ಈ ಯೋಜನೆ ಮೂಲಕ ಎನ್‌ಡಿಎ ಸರ್ಕಾರ ರಾಜಕೀಯ ಧ್ರುವೀಕರಣ ಮಾಡುತ್ತಿದೆ ಎಂದು ಜೈರಾಮ್ ರಮೇಶ್ ಕಿಡಿಕಾರಿದರು.

ಗಂಗಾ ಶುದ್ಧೀಕರಣ ಯೋಜನೆಯನ್ನು ಸಾಧು ಸಂತರ ಯೋಜನೆ ಮಾಡಬೇಡಿ, ಗಂಗಾ ರಾಷ್ಟ್ರೀಯ ನದಿಯಾಗಿದ್ದು ದೇಶದ ಸಂಸ್ಕೃತಿಯ ಪ್ರತೀಕವಾಗಿದೆ. ಹೀಗಾಗಿ ಈ ಯೋಜನೆಯನ್ನು ಜನರ ಯೋಜನೆಯನ್ನಾಗಿ ಮಾಡಿ ಇಡೀ ಸಮಾಜವೇ ಪಾಲ್ಗೊಳ್ಳುವಂತೆ ಮಾಡಬೇಕೆಂದು ಆಗ್ರಹಿಸಿದರು.

ಗಂಗಾ ಶುದ್ಧೀಕರಣ ವಿಚಾರವಾಗಿ ನಾಳೆ  "ಗಂಗಾ ಮಂಥನ್" ಎಂಬ ಹೆಸರಿನ ಚಿಂತನ ಮಂಥನ ಸಭೆ ನಡೆಯಲಿದ್ದು, ಇದರಲ್ಲಿ ಕೇಂದ್ರ ಸಚಿವರು, ಸಂಸದರು, ತಜ್ಞರು, ಎನ್‌ಜಿಓಗಳು ಹಾಗೂ ಸಾಧು ಸಂತರುಗಳು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಜೈರಾಮ್ ಈ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement