ಗುಜರಾತ್ ರಾಜ್ಯಪಾಲೆ ಕಮಲಾ ಬೇನಿವಾಲ್ ವರ್ಗಾವಣೆ
ನವದೆಹಲಿ: ಗುಜರಾತ್ ರಾಜ್ಯಪಾಲೆ ಕಮಲಾ ಬೇನಿವಾಲ್ರನ್ನು ಮಿಜೋರಾಂ ರಾಜ್ಯದ ರಾಜ್ಯಪಾಲರಾಗಿ ವರ್ಗಾವಣೆ ಮಾಡಿ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಆದೇಶ ಹೊರಡಿಸಿದೆ.
ಯುಪಿಎ ಸರ್ಕಾರದ ಅವಧಿಯಲ್ಲಿ ನೇಮಕವಾಗಿದ್ದ ಹಲವು ರಾಜ್ಯಪಾಲರಿಂದ ರಾಜಿನಾಮೆ ಪಡೆದಿರುವ ಕೇಂದ್ರ ಸರ್ಕಾರ, ಇದೀಗ ರಾಜ್ಯಪಾಲರ ವರ್ಗಾವಣೆಗೆ ಮುಂದಾಗಿದ್ದು, ಗುಜರಾತ್ ರಾಜ್ಯಪಾಲೆ ಕಮಲಾ ಬೇನಿವಾಲ್ರನ್ನು ಮಿಜೋರಾಂ ರಾಜ್ಯಪಾಲರಾಗಿ ವರ್ಗಾವಣೆ ಮಾಡಿದೆ.
ಗುಜರಾತ್ ರಾಜ್ಯಪಾಲೆ ವರ್ಗಾವಣೆ ಹಿನ್ನೆಲೆ ತೆರವುಗೊಂಡಿದ್ದ ರಾಜ್ಯಪಾಲರ ಹುದ್ದೆಗೆ ಪ್ರಸ್ತುತ ರಾಜಸ್ಥಾನದ ರಾಜ್ಯಪಾಲೆ ಆಗಿರುವ ಮಾರ್ಗರೇಟ್ ಆಳ್ವಾ ಅವರಿಗೆ ಗುಜರಾತ್ ರಾಜ್ಯಪಾಲೆಯಾಗಿ ನೇಮಿಸಿದ್ದು, ಹೆಚ್ಚುವರಿ ಸ್ಥಾನ ನೀಡಲಾಗಿದೆ.