ದಾವೂದ್ ಸೋದರಿ ಹಸೀನಾ ಹೃದಯಾಘಾತದಿಂದ ಸಾವು
ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರಿ ಹಸೀನಾ ಪಾರ್ಕರ್ ಅವರು ಹೃದಯಾಘಾತದಿಂದ ಹಬೀಬ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಇಂದು ಅವರ ಅಂತ್ಯ ಸಂಸ್ಕಾರ ಜರುಗಲಿದ್ದು, ದಾವೂದ್ ಸೋದರಿಯ ಅಂತ್ಯ ಸಂಸ್ಕಾರಕ್ಕೆ ಬರುವ ಸಾಧ್ಯತೆಯಿದ್ದು ಮನೆಯ ಸುತ್ತ ಮುತ್ತು ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.
56 ವರ್ಷದ ಪಾರ್ಕರ್ ಅವರು ಮುಂಬಯಿಯಲ್ಲಿ ಹಲವು ವರ್ಷಗಳಿಂದ ವಾಸವಾಗಿದ್ದರು.