ಫತ್ವಾ ಹೊರಡಿಸುವುದು ಕಾನೂನು ಬಾಹಿರ: ಸುಪ್ರೀಂ
ಮುಸ್ಲಿಂ ಧಾರ್ಮಿಕ ಸಂಘಟನೆಗಳು ಫತ್ವಾ ಹೊರಡಿಸುವುದು...
ನವದೆಹಲಿ: ಮುಸ್ಲಿಂ ಧಾರ್ಮಿಕ ಸಂಘಟನೆಗಳು ಫತ್ವಾ ಹೊರಡಿಸುವುದು ಕಾನೂನು ಬಾಹಿರ ಎಂದು ಸುಪ್ರೀಂ ಕೋರ್ಟ್ ಸೋಮವಾರ ಮಹತ್ವದ ಆದೇಶ ನೀಡಿದೆ.
ಫತ್ವಾ ವಿರುದ್ಧ ದೆಹಲಿ ವಕೀಲರೊಬ್ಬರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಯ ವಿಚಾರಣೆ ನಡೆಸಿದ ಕೋರ್ಟ್, ಮುಸ್ಲಿಂರ ಪ್ರತ್ಯೇಕ ಶರಿಯತ್ ಕೋರ್ಟ್‌ಗಳಿಗೆ ಕಾನೂನಿನ ಮಾನ್ಯತೆ ಇಲ್ಲ. ಹೀಗಾಗಿ ಫತ್ವಾ ಹೊರಡಿಸುವುದು ಕಾನೂನು ಬಾಹಿರ ಎಂದು ಹೇಳಿದೆ.
ಮುಗ್ಧರನ್ನು ಬಲಿ ಪಶು ಮಾಡುವುದಕ್ಕೆ ನಂಬಿಕೆ ಹಾಗೂ ಧರ್ಮವನ್ನು ಬಳಸಬೇಡಿ ಎಂದಿರುವ ಕೋರ್ಟ್, ಫತ್ವಾ ಹೊರಡಿಸುವುದು ವೈಯಕ್ತಿಕ ಹಿತಾಸಕ್ತಿ. ನಿಮ್ಮ ವೈಯಕ್ತಿಕ ಹಿತಾಸಕ್ತಿಗೆ ಕಾನೂನಿನಲ್ಲಿ ಮಾನ್ಯತೆ ಇಲ್ಲ ಸ್ಪಷ್ಟಪಡಿಸಿದೆ.