ಬೆಂಗಳೂರಿಗೆ ಬಂದಿದ್ದಾರೆ ಎಕ್ಸ್ ಟ್ರಾ ಟೆರೆಸ್ಟ್ರಿಯಲ್ಸ್
ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ಫೀನಿಕ್ಸ್ ಮಾರ್ಕೆಟ್ ಸಿಟಿಯಲ್ಲಿ....
ಬೆಂಗಳೂರು: ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ಫೀನಿಕ್ಸ್ ಮಾರ್ಕೆಟ್ ಸಿಟಿಯಲ್ಲಿ
ಎಕ್ಸ್ ಟ್ರಾ ಟೆರೆಸ್ಟ್ರಿಯಲ್ಸ್ ಆಗಮಿಸಿದ್ದರು. ಆತಂಕ ಪಡಬೇಕಿಲ್ಲ, ಅವರು ಆಧುನಿಕ ಸರ್ಕಸ್ ಮಾಡಬಂದಿದ್ದ ಎಕ್ಸ್ ಟ್ರಾ ಟೆರೆಸ್ಟ್ರಿಯಲ್ಸ್ ಎಂಬ ತಂಡದವರು. ಕಣ್ಣು ಕೋರೈಸುವ ಈ ಆಧುನಿಕ ಕಾಲದ ಸರ್ಕಸ್ ಮೊನ್ನೆ ಭಾನುವಾರ, ಇಡೀ ಬೆಂಗಳೂರಿಗರನ್ನು ಅಚ್ಚರಿಗೆ ನೂಕಿತು. 75 ನಿಮಿಷಗಳ ಅದ್ಭುತ ಲೋಕ ಮತ್ತೆ ಇದೇ ಜುಲೈ 12 ಮತ್ತು 13 ರಂದು ಫೀನಿಕ್ಸ್ ಮಾರ್ಕೆಟ್ ಸಿಟಿಯಲ್ಲಿ ಜರುಗಲಿದೆ. ಸಂಜೆ 4 ಗಂಟೆ, 6 ಗಂಟೆ, 8 ಗಂಟೆಗೆ ಈ ಪ್ರದರ್ಶನವಿದ್ದು 500 ರು, 800 ರು, 1200 ರು, 1500 ರು. ಮತ್ತು 2000 ರು. ದರದಲ್ಲಿ ಟಿಕೆಟ್ ಗಳು ಲಭ್ಯ. ಆನ್ಲೈನ್ ನಲ್ಲಿ ಟಿಕೆಟ್ ಕೊಳ್ಳಬೇಕಾದಲ್ಲಿ www.wowet.in ಗೆ ಹೋಗಬಹುದು.Showspace ಎಂಬ ಭಾರತದ ಪ್ರಸಿದ್ಧ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿ ಈ ಮನರಂಜನೆಯ ಹಿಂದಿದೆ.