ರೈಲ್ವೆ ಬಜೆಟ್: 58 ಹೊಸ ರೈಲುಗಳ ಪಟ್ಟಿ
ಹೊಸದಾಗಿ 58 ರೈಲುಗಳಿಗೆ ಚಾಲನೆ, ಈಗಾಗಲೇ ಇರುವ 11 ರೈಲುಗಳನ್ನು...
ನವದೆಹಲಿ: ಹೊಸದಾಗಿ 58 ರೈಲುಗಳಿಗೆ ಚಾಲನೆ ನೀಡಲಿದ್ದೇವೆ. ಈಗಾಗಲೇ ಇರುವ 11 ರೈಲುಗಳನ್ನು ವಿಸ್ತರಿಸಲಾಗುವುದು. 9 ಮಾರ್ಗಗಳಿಗೆ ವಜ್ರ ಚತುಷ್ಪಥ ನಿರ್ಮಿಸಿ ಅತಿ ವೇಗದ ರೈಲುಗಳನ್ನು ಒದಗಿಸಲಿದ್ದೇವೆ. ಅದಲ್ಲದೆ ಮುಂಬೈ- ಅಹಮದಾಬಾದ್ ಮಾರ್ಗಕ್ಕೆ ಬುಲ್ಲೆಟ್ ರೈಲನ್ನು ಆರಂಭಿಸುವ ಪ್ರಸ್ತಾವವನ್ನು ಮುಂದೆ ಹಾಕಿದ್ದೇವೆ. 5 ಜನಸಾಧಾರಣ ರೈಲುಗಳು, 5 ಪ್ರೀಮಿಯಂ ರೈಲುಗಳು, 6 ಎಸಿ ಎಕ್ಸ್‌ಪ್ರೆಸ್ ರೈಲುಗಳು, 27 ಎಕ್ಸ್‌ಪ್ರೆಸ್ ರೈಲುಗಳು, 8 ಪ್ಯಾಸೆಂಜರ್ ರೈಲುಗಳು, 2 ಮೆಮು ಮತ್ತು 5 ಡೆಮು ಸೇವೆಗಳನ್ನು ಈ ವರ್ಷ ಆರಂಭಿಸಲಿದ್ದೇವೆ. ಹಬ್ಬ, ರಜೆ ಮತ್ತು ವಿಶೇಷ ದಿನಗಳಲ್ಲಿ ರೈಲ್ವೆ ಬೇಡಿಕೆಗಳನ್ನು ಈಡೇರಿಸಲು ವಿಶೇಷ ರೈಲುಗಳನ್ನು ಒದಗಿಸಲಾಗುವುದು ಎಂದು ರೈಲ್ವೆ ಸಚಿವರಾದ ಸದಾನಂದ ಗೌಡ ಹೇಳಿದ್ದಾರೆ.
ರೈಲ್ವೆ ಬಜೆಟ್ ಮಂಡಣೆ ವೇಳೆ ಸಚಿವಾಲಯ ಹೊರತರಲಿರುವ ಎಲ್ಲ ಯೋಜನೆಗಳ ಬಗ್ಗೆ ಅವರು ವಿವರಿಸಿದರು. ಈ ಪಟ್ಟಿಯಲ್ಲಿರುವ 58 ಹೊಸ ರೈಲ್ವೆ ಮಾರ್ಗಗಳು ಈ ರೀತಿಯಿವೆ:
ಜನಸಾಧಾರಣ ರೈಲುಗಳು-
ಅಹಮದಾಬಾದ್- ದರ್ಭಂಗಾ ಜನಸಾಧಾರಣ ಎಕ್ಸ್‌ಪ್ರೆಸ್ (ಸೂರತ್ ಮೂಲಕ)
ಜಯನಗರ್- ಮುಂಬೈ ಜನಸಾಧಾರಣ ಎಕ್ಸ್‌ಪ್ರೆಸ್
ಮುಂಬೈ- ಗೋರಖ್‌ಪುರ ಜನಸಾಧಾರಣ ಎಕ್ಸ್‌ಪ್ರೆಸ್
ಸಹರಸಾ- ಆನಂದ್ ವಿಹಾರ್ ಜನಸಾಧಾರಣ ಎಕ್ಸ್‌ಪ್ರೆಸ್ (ಮೋತಿಹಾರಿ ಮೂಲಕ)
ಸಹರಸಾ- ಅಮೃತಸರ ಜನಸಾಧಾರಣ ಎಕ್ಸ್‌ಪ್ರೆಸ್
ಪ್ರೀಮಿಯಂ ರೈಲುಗಳು
ಮುಂಬೈ ಸೆಂಟ್ರಲ್- ನವದೆಹಲಿ ಪ್ರೀಮಿಯಂ ಎಸಿ ಎಕ್ಸ್‌ಪ್ರೆಸ್
ಶಾಲಿಮಾರ್- ಚೆನ್ನೈ ಪ್ರೀಮಿಯಂ ಎಸಿ ಎಕ್ಸ್‌ಪ್ರೆಸ್
ಸಿಕಂದರಾಬಾದ್- ಹಜರತ್ ನಿಝಾಮುದ್ಧೀನ್ ಪ್ರೀಮಿಯಂ ಎಸಿ ಎಕ್ಸ್‌ಪ್ರೆಸ್
ಜೈಪುರ- ಮದುರೈ ಪ್ರೀಮಿಯಂ ಎಕ್ಸ್‌ಪ್ರೆಸ್
ಕಾಮಾಖ್ಯಾ- ಬೆಂಗಳೂರು ಪ್ರೀಮಿಯಂ ಎಕ್ಸ್‌ಪ್ರೆಸ್
ಎಸಿ ಎಕ್ಸ್‌ಪ್ರೆಸ್ ರೈಲುಗಳು
ವಿಜಯವಾಜಾ- ನವದೆಹಲಿ- ಎಪಿ ಎಕ್ಸ್‌ಪ್ರೆಸ್ (ಪ್ರತಿ ದಿನ)
ಲೋಕಮಾನ್ಯ ತಿಲಕ (ಟಿ)- ಲಖನೌ (ಸಾಪ್ತಾಹಿಕ)
ನಾಗ್ಪುರ- ಪುಣೆ (ವಾರಕ್ಕೊಮ್ಮೆ)
ನಾಗ್ಪುರ- ಅಮೃತಸರ (ವಾರಕ್ಕೊಮ್ಮೆ)
ನಹಾರ್‌ಲಗೂನ್- ನವದೆಹಲಿ (ವಾರಕ್ಕೊಮ್ಮೆ)
ನಿಝಾಮುದ್ಧೀನ್- ಪುಣೆ (ವಾರಕ್ಕೊಮ್ಮೆ)
ಎಕ್ಸ್‌ಪ್ರೆಸ್ ರೈಲುಗಳು
ಅಹಮದಾಬಾದ್- ಪಟನಾ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ) ವಾರಾಣಸಿ ಮೂಲಕ
ಅಹಮದಾಬಾದ್ ಚೆನ್ನೈಎಕ್ಸ್‌ಪ್ರೆಸ್ (ವಾರದಲ್ಲಿ ಎರಡು ದಿನ) ವಸಯಿ ರೋಡ್ ಮೂಲಕ
ಬೆಂಗಳೂರು- ಮಂಗಳೂರು ಎಕ್ಸ್‌ಪ್ರೆಸ್ (ಪ್ರತಿ ದಿನ)
ಬೆಂಗಳೂರು- ಶಿವಮೊಗ್ಗ ಎಕ್ಸ್‌ಪ್ರೆಸ್ (ವಾರದಲ್ಲಿ ಎರಡು ದಿನ)
ಬಾಂದ್ರಾ(ಟಿ)- ಜೈಪುರ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ) ನಾಗ್ಡಾ, ಕೋಟಾ ಮೂಲಕ
ಬೀದರ್- ಮುಂಬೈ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ)